ಬೀದರ್ : ಮಹಾಕುಂಭ ಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಐವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಂದು ಬೆಳಗಿನ ಜಾವ ಮಿರ್ಜಾಪುರ್ ಜಿಲ್ಲೆಯ ರೂಪಾಪುರ ಬಳಿ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಗಾಯಾಳುಗಳ ಸ್ಥಿತಿಯೂ ಚಿಂತಾಜನಕವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ.
ಬೀದರ್ನ ಲಾಡಗೇರಿ ನಗರ ನಿವಾಸಿಗಳಾದ 14 ಜನ ಫೆ.18ರಂದು ಮಧ್ಯಾಹ್ನ ಬೀದರ ನಗರದಿಂದ ಕ್ರೂಸರ್ ವಾಹನದಲ್ಲಿ ಪ್ರಯಾಗರಾಜಗೆ ಹೋಗಿದ್ದರು. ಇಂದು (ಫೆ.21) ಬೆಳಗಿನ ಜಾವ ಪುಣ್ಯಸ್ನಾನ ಮುಗಿಸಿಕೊಂಡು ಕಾಶಿಗೆ ಹೋಗುವಾಗ ರೂಪಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಮಿರ್ಜಾಪೂರಾದ್ ಠಾಣೆ PSI ತ್ರಿಪಾಠಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Author: Btv Kannada
Post Views: 1,158