MLA ಪ್ರಕಾಶ್​ ಕೋಳಿವಾಡ ಆಪ್ತ ಸಹಾಯಕನ ಮನೆಯಲ್ಲಿ ಕಳ್ಳತನ.. 21 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಕದ್ದು ಖದೀಮರು ಎಸ್ಕೇಪ್!

ಹಾವೇರಿ : ಶಾಸಕ ಪ್ರಕಾಶ ಕೋಳಿವಾಡ ಅವರ ಆಪ್ತಸಹಾಯಕನ ಮನೆಗೆ ಕಳ್ಳರು ಕನ್ನ ಹಾಕಿದ್ದು, ಸುಮಾರು 21 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದ ಕಂಠಿಬಿರೇಶ್ವರ ನಗರದಲ್ಲಿ ನಡೆದಿದೆ.

ಶಾಸಕ ಪ್ರಕಾಶ ಕೋಳಿವಾಡ ಅಪ್ತ ಸಹಾಯಕರಾಗಿ ಕೆಲಸ ಮಾಡ್ತಿದ್ದ ಶ್ರೀನಿವಾಸ ಹಳ್ಳಳಿ ಅವರ ಮನೆಯ ಬಾಗಿಲು ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ. ಟ್ರಿಜೋರಿಯಲ್ಲಿಟ್ಟಿದ್ದ ಮಾಂಗಲ್ಯಸರ ಮತ್ತು ಕಿವಿ ಒಲೆ ಸೇರಿದಂತೆ ನಾಲ್ಕುವರೆ ಲಕ್ಷ ರೂ. ನಗದನ್ನು ದೋಚಿದ್ದಾರೆ.

ಶ್ರೀನಿವಾಸ ಹಳ್ಳಳಿ
ಶ್ರೀನಿವಾಸ ಹಳ್ಳಳಿ

ಶ್ರೀನಿವಾಸ ಅವರು ಬೆಂಗಳೂರಿಗೆ ತೆರಳಿದ್ದ ವೇಳೆ ಕಳ್ಳರು ಮನೆ ಬಾಗಿಲು ಮುರಿದು ಕೈಚಳಕ ತೋರಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಣೇಬೆನ್ನೂರು ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : BBMP ಎಲೆಕ್ಷನ್ ಸಿದ್ಧತೆ ಬಗ್ಗೆ ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ.. ನ.1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ!

Btv Kannada
Author: Btv Kannada

Read More