ಚಿತ್ರದುರ್ಗ : ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಕೆಸಿ ವೀರೇಂದ್ರ ಪಪ್ಪಿ ಹಾಗೂ ಅವರ ಸಹೋದರರ ಚಳ್ಳಕೆರೆ ಪಟ್ಟಣದ ಹಳೆ ಟೌನ್ನಲ್ಲಿರುವ 4 ನಿವಾಸಗಳ ಮೇಲೆ ED ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಡುತ್ತಿದ್ದಾರೆ.

ಕೆಸಿ ವೀರೇಂದ್ರ ಅವರ ಸಹೋದರರಾದ ಕೆ.ಸಿ.ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ ನಿವಾಸದಲ್ಲೇ ಬೀಡು ಬಿಟ್ಟಿರುವ ED ಅಧಿಕಾರಿಗಳು, ಶೋಧ ಕಾರ್ಯ ನಡೆಸುತ್ತಿದ್ದಾರೆ. ದೆಹಲಿಯಿಂದ 7-8 ಖಾಸಗಿ ವಾಹನಗಳಲ್ಲಿ ಆಗಮಿಸಿದ ಇ.ಡಿ ತಂಡ, ವೀರಶೈವ ಸಂಘದ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮನೆಯಲ್ಲೂ ಪರಿಶೀಲನೆ ನಡೆಸುತ್ತಿದೆ.
MLA ವೀರೇಂದ್ರ ಪಪ್ಪಿ ಅವರು ಸದ್ಯ ಬ್ಯುಸಿನೆಸ್ ಸಂಬಂಧ ಹೊರ ರಾಜ್ಯಕ್ಕೆ ತೆರಳಿದ್ದು, ಶಾಸಕರು ಮನೆಯಿಂದ ಹೊರಗಿದ್ದಾಗಲೇ ED ದಾಳಿ ನಡೆಸಿ ಶೋಧ ಕಾರ್ಯ ಮಾಡುತ್ತಿದೆ.
ಇದನ್ನೂ ಓದಿ : ಯೂಟ್ಯೂಬರ್ ಸಮೀರ್‌ಗೆ ತಪ್ಪದ ಸಂಕಷ್ಟ.. ಕಡೂರು ಠಾಣೆಯಲ್ಲಿ ಮತ್ತೊಂದು ದೂರು ದಾಖಲು!
Author: Btv Kannada
Post Views: 417







