ಕೋಲಾರ : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಹೂಡಿ ವಿಜಯ್ ಕುಮಾರ್ ಅವರ ಸ್ವಾಭಿಮಾನಿ ಜನತಾ ಪಕ್ಷ ಧರ್ಮಸ್ಥಳ ಚಲೋ ಕಾರ್ಯಕ್ರಮ ಆಯೋಜನೆ ಮಾಡಿದೆ. ಇದೀಗ ಕೋಲಾರ ಜಿಲ್ಲೆಯ ಮಾಲೂರಿನಿಂದ ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಆನಂದ ಗುರೂಜಿ, ನಾಗಲಾಪುರದ ತೇಜೇಶಲಿಂಗ ಶಿವಚಾರ್ಯ ಸ್ವಾಮೀಜಿ, ಬೆಳ್ಳಾವಿ ಮಠದ ಮಹಂತ ಶಿವಾಚಾರ್ಯ ಸ್ವಾಮೀಜಿಗಳು ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ವೈಟ್ ಗಾರ್ಡನ್ನಿಂದ ಚಾಲನೆ ಸಿಕ್ಕಿದ್ದು, ಭಕ್ತರು ನೂರಾರು ಬಸ್ ಹಾಗೂ ಕಾರುಗಳಲ್ಲಿ ಹೊರಟಿದ್ದಾರೆ.

ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ ಅನ್ನೋ ಘೋಷವಾಕ್ಯದೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಚೆನ್ನೈ ಕಾರಿಡಾರ್ ಮೂಲಕ ದಾಬಸ್ಪೇಟೆ, ಹಾಸನ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಇನ್ನು ಸಂಜೆ ಧರ್ಮಸ್ಥಳದಲ್ಲಿ ದೀಪೋತ್ಸವ ಮತ್ತು ಹೋಮಕ್ಕೂ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಅಣ್ಣಾವ್ರ ಮೊಮ್ಮಗ ಷಣ್ಮುಖ ನಟನೆಯ “ನಿಂಬಿಯಾ ಬನಾದ ಮ್ಯಾಗ ಪೇಜ್ 1″ಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ!







