ಬೆಂಗಳೂರಲ್ಲಿ ಬಡ ವ್ಯಾಪಾರಿಯ ತಳ್ಳುಗಾಡಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ದುರುಳರು!

ಬೆಂಗಳೂರು : ಬೆಂಗಳೂರಿನಲ್ಲಿ ನೀಚಾತಿನೀಚ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಡ ವ್ಯಾಪಾರಿಯೊಬ್ಬನ ಜೀವನೋಪಾಯಕ್ಕೆ ದುರುಳರು ಬೆಂಕಿ ಇಟ್ಟಿರುವ ಘಟನೆ ಉಲ್ಲಾಳುವಿನ ಮರಿಯಪ್ಪನ ಪಾಳ್ಯದಲ್ಲಿ ನಡೆದಿದೆ.

ಹೌದು.. ಜ್ಞಾನಭಾರತಿ ಎಕ್ಸ್ ಟೆನ್ಷನ್ ಬಳಿ ತರಕಾರಿ-ಹಣ್ಣು ಮಾರುತ್ತಿದ್ದ ವ್ಯಾಪಾರಿ ತಳ್ಳುಗಾಡಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ವ್ಯಾಪಾರಿ ಕೆಲ ದಿನಗಳಿಂದ ತಳ್ಳುಗಾಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ. ಆದ್ರೆ ತಡರಾತ್ರಿ ಬಂದ ಪಾಪಿಗಳು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಘಟನೆಯಲ್ಲಿ  25 ಸಾವಿರ ಮೌಲ್ಯದ ಹಣ್ಣು ತರಕಾರಿ ಸಂಪೂರ್ಣ ಭಸ್ಮವಾಗಿದೆ.

ಜ್ಞಾನಭಾರತಿ ಎಕ್ಸ್ ಟೆನ್ಷನ್ ಬಳಿ ತರಕಾರಿ-ಹಣ್ಣು ಮಾರುತ್ತಿದ್ದ ವ್ಯಾಪಾರಿ ಹೆಚ್ಚೆಚ್ಚು ಗ್ರಾಹಕರಿಂದಾಗಿ ಒಳ್ಳೆಯ ವ್ಯಾಪಾರ ಮಾಡುತ್ತಿದ್ದ. ಆತನ ಏಳಿಗೆ ಸಹಿಸದ ದುಷ್ಕರ್ಮಿಗಳೇ ತಡರಾತ್ರಿ ಬೈಕ್​ನಲ್ಲಿ ಬಂದು ಈ ಕೃತ್ಯ ಎಸಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಈ ದುಷ್ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ‌ ಖಂಡನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ರೇಸ್ ಕೋರ್ಸ್ ಬಳಿ ಲಂಚ ಕೇಳಲು ಹೋಗಿ ಸಿಕ್ಕಿಬಿದ್ದ ಐವರು ಅಬಕಾರಿ ಅಧಿಕಾರಿಗಳು ಸಸ್ಪೆಂಡ್!

Btv Kannada
Author: Btv Kannada

Read More