ಬೆಂಗಳೂರು : ನಗರದ ರೇಸ್ ಕೋರ್ಸ್ ಟರ್ಫ್ ಕ್ಲಬ್ನ ಲೈಸೆನ್ಸ್ ರಿನಿವಲ್ಗೆ ಲಂಚ ಕೇಳಲು ಹೋಗಿ ಸಿಕ್ಕಿಬಿದ್ದ ಐವರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಅಬಕಾರಿ ಎಸ್ಪಿ ಸೈಯದ್ ಶಹಾಬುದ್ದೀನ್ ಬೋಕಾರಿ, ಅಬಕಾರಿ ಉಪ ಅಧೀಕ್ಷಕ ಅಬೂಬಕರ್ ಮುಜಾವರ್, ಅಬಕಾರಿ ಇನ್ಸ್ಪೆಕ್ಟರ್ ಎಲ್. ಮಧುಸೂದನ್ ಮತ್ತು ಪ್ರಥಮ ದರ್ಜೆ ಸಹಾಯಕಿ ಶೀತಲ್ ಸಸ್ಪೆಂಡ್ ಆದ ಅಧಿಕಾರಿಗಳು.

ಈ ಐವರು ಅಧಿಕಾರಿಗಳು ರೇಸ್ ಕೋರ್ಸ್ ರಸ್ತೆಯ ಬೆಂಗಳೂರು ಟರ್ ಕ್ಲಬ್ ಆವರಣದಲ್ಲಿ ಸಿಎಲ್-4 ಸನ್ನದು ಪರಿಷ್ಕೃತ ನೀಲಿ ನಕಾಶ ಅನುಮೋದನೆ ಸಂಬಂಧ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿ ಲಂಚಕ್ಕೆ ಬೇಡಿಕೆಯಿಟ್ಟು ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿತ್ತು. ಹಾಗಾಗಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ ಅನ್ವಯ ಐವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಇನ್ನೂ ಜಂಟಿ ಇಲಾಖಾ ವಿಚಾರಣೆ ನಡೆಸಲು ಅಬಕಾರಿ ಆಯುಕ್ತರನ್ನು ಶಿಸ್ತು, ಪ್ರಾಧಿಕಾರವನ್ನಾಗಿ ನೇಮಿಸಲಾಗಿದೆ. ಅಮಾನತ್ತು ಅವಧಿಯಲ್ಲಿ ಅಧಿಕಾರಿ ಮತ್ತು ನೌಕರರು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದನ್ನೂ ಓದಿ : ‘ರಿಪ್ಪನ್ ಸ್ವಾಮಿ’ ಟ್ರೇಲರ್‌ನಲ್ಲಿ ವಿಜಯ್ ರಾಘವೇಂದ್ರ ಭಯಂಕರ ಲುಕ್.. ಆಗಸ್ಟ್ 29ಕ್ಕೆ ಸಿನಿಮಾ ತೆರೆಗೆ!







