ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ ಸರ್ಕಾರವು 10 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದೆ.
ಈ ಅನುದಾನವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಮೂಲಕ ನೀಡಲಾಗುತ್ತಿದ್ದು, ಭೂಕುಸಿತದಿಂದ ತೀವ್ರವಾಗಿ ಹಾನಿಗೊಳಗಾದ 100 ಕುಟುಂಬಗಳಿಗೆ ನೆರವಾಗಲಿದೆ.
ಭೂಕುಸಿತದ ಹಿನ್ನೆಲೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಜುಲೈ 2024ರಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತವು ಭಾರೀ ಜನಹಾನಿ ಮತ್ತು ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣವಾಯಿತು. ಈ ದುರಂತದಲ್ಲಿ ನೂರಾರು ಕುಟುಂಬಗಳು ತಮ್ಮ ಮನೆ, ಜೀವನೋಪಾಯ ಮತ್ತು ಆಸ್ತಿಯನ್ನು ಕಳೆದುಕೊಂಡಿವೆ.
ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರವು, ತನ್ನ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 10 ಕೋಟಿ ರೂಪಾಯಿಗಳನ್ನು ಪುನರ್ವಸತಿ ಕಾರ್ಯಕ್ಕಾಗಿ ಮೀಸಲಿಡಲು ತೀರ್ಮಾನಿಸಿದೆ. ಆದರೆ ಪ್ರಿಯಾಂಕ ಗಾಂಧಿ ಸಂಸದೆಯಾಗಿರುವ ವಯನಾಡ್ ಕ್ಷೇತ್ರದ ಮೆಪ್ಪಾಡಿ ಹಾನಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ತೆಂಗಿನಕಾಯಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯ ಕೊಲೆ – ಇಬ್ಬರು ಆರೋಪಿಗಳು ಅರೆಸ್ಟ್!
Author: Btv Kannada
Post Views: 281







