ಚಿಕ್ಕಮಗಳೂರು : ತೆಂಗಿನಕಾಯಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಕೊಲೆಗೈದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. 37 ವರ್ಷದ ಕುಮಾರ್ ಮೃತದುರ್ದೈವಿ.
ಈ ಹಿಂದೆ ಹಲವು ಬಾರಿ ತೆಂಗಿನಕಾಯಿ ಕದ್ದಿದ್ದ ಕುಮಾರ್, ನಿನ್ನೆ ಕೂಡ ಮದ್ಯ ಸೇವಿಸಿ ಕಳ್ಳತನಕ್ಕೆ ಯತ್ನಿಸುವಾಗ ತೋಟದ ಮಾಲೀಕರೊಂದಿಗೆ ಗಲಾಟೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಮಧು ಮತ್ತು ಚಂದ್ರಪ್ಪ ಹಲ್ಲೆ ಮಾಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಖರಾಯಪಟ್ಟಣ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಆಗ್ರಹ – ಯೂಟ್ಯೂಬರ್ಸ್ ವಿರುದ್ಧ EDಗೆ ಹಿಂದೂ ಪರ ಹೋರಾಟಗಾರ ದೂರು!
Author: Btv Kannada
Post Views: 358







