ಟಿಪ್ಪರ್​ ಲಾರಿಗೆ ಹಿಂಬದಿಯಿಂದ KSRTC ಬಸ್ ಡಿಕ್ಕಿ – ಕಂಡಕ್ಟರ್​ ಸ್ಥಳದಲ್ಲೇ ಸಾವು, ಚಾಲಕನಿಗೆ ಗಂಭೀರ ಗಾಯ!

ಕೊಪ್ಪಳ : ಟಿಪ್ಪರ್​ ಲಾರಿಗೆ ಹಿಂಬದಿಯಿಂದ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಡಕ್ಟರ್​ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. 42 ವರ್ಷದ ಉಮೇಶ್​ ಮೃತ ಬಸ್ ಕಂಡಕ್ಟರ್.

ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಡಿಪೋಗೆ ಸೇರಿದ KSRTC ಬಸ್ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಟಿಪ್ಪರ್ ಲಾರಿ ಯೂಟರ್ನ್​ ತೆಗೆದುಕೊಳ್ಳುವಾಗ ಚಾಲಕ ಸಡನ್ ಬ್ರೇಕ್​ ಹಾಕಿದ್ದಾನೆ.

ಬ್ರೇಕ್​ ಹಾಕಿದ್ದನ್ನು ಗಮನಿಸದ ಬಸ್ ಚಾಲಕ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮರಿಯಮ್ಮನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಆಕ್ಷೇಪಾರ್ಹ ರೀಲ್ಸ್​​, ವಿಡಿಯೋಗಳನ್ನು ಅಪ್ಲೋಡ್​​ ಮಾಡಿದ್ದರೆ ತಕ್ಷಣವೇ ತೆಗೆದುಹಾಕಿ – ವಕೀಲರಿಗೆ KSBC ಖಡಕ್ ಎಚ್ಚರಿಕೆ!

Btv Kannada
Author: Btv Kannada

Read More