ಆಕ್ಷೇಪಾರ್ಹ ರೀಲ್ಸ್​​, ವಿಡಿಯೋಗಳನ್ನು ಅಪ್ಲೋಡ್​​ ಮಾಡಿದ್ದರೆ ತಕ್ಷಣವೇ ತೆಗೆದುಹಾಕಿ – ವಕೀಲರಿಗೆ KSBC ಖಡಕ್ ಎಚ್ಚರಿಕೆ!

ಬೆಂಗಳೂರು : ವೃತ್ತಿನಿರತ ವಕೀಲರು ಸೋಶಿಯಲ್​ ಮೀಡಿಯಾಗಳಲ್ಲಿ ತಮ್ಮನ್ನು ತಾವೇ ಉನ್ನತೀಕರಿಸಿಕೊಳ್ಳುವಂತಹ ಪ್ರಚಾರದ ಯಾವುದೇ ರೀಲ್​​ಗಳು ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದರೆ ಅಂತಹ ಆಕ್ಷೇಪಾರ್ಹ ರೀಲ್‌ಗಳು, ವಿಡಿಯೊಗಳನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲವಾದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಕೀಲರ ಪರಿಷತ್, ವಕೀಲರಿಗೆ ಎಚ್ಚರಿಕೆ ನೀಡಿದೆ.

ವಕೀಲರು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪ್ರಕಟಿಸುವುದು, ಕಿರು ವಿಡಿಯೋಗಳನ್ನು ಮಾಡುವುದು, ಕಾನೂನು ಸಲಹೆ ನೀಡುವ ರೀಲ್‌ಗಳು ಮತ್ತು ಅವುಗಳನ್ನು ಫೇಸ್‌ಬುಕ್, ಎಕ್ಸ್, ಲಿಂಕ್​ಡ್​​​ ಇನ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಪ್ರಕಟಿಸುವಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಇತ್ತೀಚೆಗೆ ನಡೆದ ರಾಜ್ಯ ವಕೀಲರ ಪರಿಷತ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಹೀಗಾಗಿ “ವಕೀಲರು ಕಡ್ಡಾಯವಾಗಿ ಈ ಸಂಬಂಧ ರೂಪಿಸಲಾಗಿರುವ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಭಾರತೀಯ ವಕೀಲರ ಪರಿಷತ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್​ಬಿಸಿ) ಹಾಗೂ ವಕೀಲರ ಕಾಯಿದೆ 1961ರ ಕಲಂ 35ರಡಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು'” ಎಂದು ಪರಿಷತ್ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ್ ತಿಳಿಸಿದ್ದಾರೆ.

ಇದನ್ನೂ ಓದಿ : ಬಗೆದಷ್ಟು ಬಯಲಾಗ್ತಿದೆ ನೆಲಮಂಗಲ RTO ರಾಜಕುಮಾರನ ಕರ್ಮಕಾಂಡ – ಹೆಣ್ಣುಬಾಕನ ಕೋಟಿ ಕೋಟಿ ಆಸ್ತಿ ಮೇಲೆ ‘ಲೋಕಾ’ ಹದ್ದಿನಕಣ್ಣು!

Btv Kannada
Author: Btv Kannada

Read More