ಬೆಂಗಳೂರು : ನೆಲಮಂಗಲ RTO ರಾಜ್ಕುಮಾರ ಬರೀ ಹೆಣ್ಣುಬಾಕನಷ್ಟೇ ಅಲ್ಲ. ಕಾಸು ಪೀಕೋ ಮಹಾ ಮಾಸ್ಟರ್ ಕೂಡ ಹೌದು. ತಾನು ಕೋಟಿ ಮಾಡಿದ್ದು ಬೇರ್ಯಾರಿಗೂ ಕಾಣ್ಬಾರ್ದು ಅಂತ ಬೇನಾಮಿ ಹೆಸರಲ್ಲಿ ಗಂಟುಕಟ್ಟಿಟ್ಟಿದ್ದಾನಂತೆ. ಇದೀಗ ರಾಜ್ಕುಮಾರ ಮನೆಬಾಗಿಲಿಗೆ ಲೋಕಾಯುಕ್ತ ಅಧಿಕಾರಿಗಳು ಎಂಟ್ರಿ ಕೊಡೋ ಕಾಲವೂ ಬಂದೇ ಬಿಟ್ಟಿದೆ.

ಹೌದು.. ಒಂದು ಕಡೆ RTO ರಾಜಕುಮಾರನ ಮೇಲೆ FIR, ಇನ್ನೊಂದು ಕಡೆ ಲೋಕಾಯುಕ್ತದಲ್ಲಿಯೂ ಕೂಡ ಕೇಸ್ ದಾಖಲಾಗಿದೆ. ಇದೀಗ ರಾಜಕುಮಾರನ ಎಲ್ಲಾ ಪ್ರಾಪರ್ಟಿಗಳ ಮೇಲೂ ಲೋಕಾ ಹದ್ದಿನಕಣ್ಣಿಟ್ಟಿದ್ದು, ಯಾವುದೇ ಕ್ಷಣ ಕೋಟಿ ಕೋಟಿ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. RTO ರಾಜಕುಮಾರ ಬಳ್ಳಾರಿ, ಭಾಲ್ಕಿ, ಬೆಂಗಳೂರಿನಲ್ಲಿ ಕೋಟಿ ಕೋಟಿ ಆಸ್ತಿ ಮಾಡಿದ್ದು, ಬೇನಾಮಿ ಪ್ರಾಪರ್ಟಿಯನ್ನ ಸ್ವಂತ ನಾದಿನಿಯ ಹೆಸರಲ್ಲಿ ಮಾಡಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಬಳ್ಳಾರಿಯಲ್ಲಿ ಮೈನಿಂಗ್ಸ್ ಲಾರಿ ನಾದಿನಿ ಹೆಸರಲ್ಲಿ ಓಡಿಸ್ತಿದ್ದಾನಂತೆ. ಕೋಟಿ ಕೋಟಿ ಬೇನಾಮಿ ಪ್ರಾಪರ್ಟಿ ಮಾಡಿಟ್ಟ ರಾಜಕುಮಾರನಿಗೆ ಈಗ ಭಯ ಶುರುವಾಗಿದ್ದು, SHRCಯಲ್ಲೂ ಈತನ ಮೇಲೆ ಕೇಸ್ ದಾಖಲಾಗುವ ಸಾಧ್ಯತೆಯಿದೆ.

ಸದ್ಯ ಮಾದನಾಯಕನಹಳ್ಳಿ ಪೊಲೀಸರು ರಾಜಕುಮಾರಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಖಾಕಿ ಕೈಗೆ ಸಿಗದೇ ಬಳ್ಳಾರಿಯಲ್ಲಿರುವ ನಾದಿನಿಯ ಮನೆಗೆ RTO ರಾಜಕುಮಾರ ಪರಾರಿಯಾಗಿರುವ ಮಾಹಿತಿಯಿದೆ. ಇನ್ನು ಈ ರಾಜಕುಮಾರ ಮತ್ತೊಬ್ಬ ಮಹಿಳಾ RTOಗೂ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಸೂಪರಿಂಟೆಂಡೆಂಟ್ ಹುದ್ದೆಯ ಹೆಣ್ಮಗಳಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ರಾಜಕುಮಾರ ಮೈಕೈ ಮುಟ್ಟೋದು ಕಣ್ಣಲ್ಲೇ ಸನ್ನೇ ಮಾಡಿ ಕಿರುಕುಳ ಕೊಡ್ತಾನಂತೆ. ಸರ್..ಬೇಡಾ ಅಂದ್ರೆ.. ರಿಸೆಪ್ಷನ್ನಲ್ಲಿ ಕೂತ್ಕೋ ಅಂತಾನಂತೆ. ನನ್ನ ಡ್ಯೂಟಿ ಅಲ್ಲ ಅಂದ್ರೂ ಬಿಡದೇ ರಾಜಕುಮಾರ ಟಾರ್ಚರ್ ಕೊಡ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಇದೀಗ ಮಹಿಳಾ ಅಧಿಕಾರಿಗಳ ದಂಡೇ ರಾಜಕುಮಾರನ ವಿರುದ್ಧ ಧ್ವನಿ ಎತ್ತಿದ್ದು, ಪಾಪದ ಕೊಡ ತುಂಬಿದ ಮೇಲೆ ರಾಜಕುಮಾರನ ಅಸಲೀಯತ್ತು ಬಟಾ ಬಯಲಾಗಿದೆ. ಲೂಟಿಕೋರ ಕಾಮಿ ರಾಜಕುಮಾರನನ್ನ ಈಗ್ಲೇ ಸಸ್ಪೆಂಡ್ ಮಾಡಿ ಎಂದು ನೊಂದ ಸಂತ್ರಸ್ತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕನ್ನಡದ ಬಹುನಿರೀಕ್ಷಿತ ’45’ ಚಿತ್ರ ಬಿಡುಗಡೆ ವಿಳಂಬವಾಗಿದ್ದೇಕೆ? VFX ತಂತ್ರಜ್ಞ ಯಶ್ ಗೌಡ ಸ್ಪಷ್ಟನೆ!







