ಮೈಸೂರು : ಮದ್ಯ ಸೇವಿಸಿ ಪಬ್‌ನಲ್ಲಿ ಕಿರಿಕ್ ಮಾಡಿದ್ದ ಮೈಸೂರು ಸಿಸಿಬಿ ಇನ್ಸ್‌ಪೆಕ್ಟರ್ ಮೋಹನ್ ಕುಮಾರ್ ಅವರನ್ನು ಅಮಾನತು ಮಾಡಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಸಿಸಿಬಿ ಇನ್ಸ್‌ಪೆಕ್ಟರ್ ಮೋಹನ್ ಕುಮಾರ್ ಚಾಮುಂಡಿ ಬೆಟ್ಟದ ತಪ್ಪಲಿನ ಜೆಸಿ ನಗರದ ಪಬ್ ಒಂದಕ್ಕೆ ತೆರಳಿ ಕುಡಿದ ಮತ್ತಿನಲ್ಲಿ ಸಿಬ್ಬಂದಿಗಳ ಜೊತೆ ಜಗಳವಾಡಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅವಾಚ್ಯ ಶಬ್ದಗಳನ್ನ ಬಳಸಿ ವಿಡಿಯೋ ಮಾಡಿದ್ರೆ ಕೇಸ್ ಮಾಡ್ತಿನಿ ಎಂದು ಪಬ್ ಸಿಬ್ಬಂದಿಗೆ ಧಮ್ಕಿ ಹಾಕಿದ್ದರು.
ಖಾಸಗಿ ಇವೆಂಟ್ಗೆ ಪಾಸ್ ಇಲ್ಲದೆ ಎಂಟ್ರಿಯಾಗಿದ್ದಾರೆ ಪಬ್ನವರು ಆರೋಪಿಸಿದ್ದು, ಇನ್ಸ್‌ಪೆಕ್ಟರ್ ಮೋಹನ್ ಕುಮಾರ್ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ರವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಇನ್ಸ್‌ಪೆಕ್ಟರ್ ಮೋಹನ್ ಕುಮಾರ್‌ರನ್ನು ಅಮಾನತು ಮಾಡಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕಳೆದ ವಾರವಷ್ಟೇ ನನ್ನ ತಾಯಿ ಹರಕೆ ಹೊತ್ತಿದ್ರು.. ನಟಿ ರಕ್ಷಿತಾ ಪ್ರೇಮ್ ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ಅನಿರೀಕ್ಷಿತ ಭೇಟಿ!







