ಬೆಂಗಳೂರು : ಬಿಎಂಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿ ಪ್ರಯಾಣಿಕನೋರ್ವ ಸಾವನ್ನಪ್ಪಿದ ಘಟನೆ ಜಯನಗರದ 4ನೇ ಬ್ಲಾಕ್‌ನಲ್ಲಿ ನಡೆದಿದೆ. ಸಂಪಂಗಿ(64) ಮೃತಪಟ್ಟ ವ್ಯಕ್ತಿ.
ಸಂಪಂಗಿ ಬಸ್ ಹತ್ತುವ ಸಮಯಲ್ಲಿ ಚಾಲಕ ಬಾಗಿಲು ಬಂದ್ ಮಾಡಿದ್ದರಿಂದ ಸಂಪಂಗಿಯ ಕೈ ಬಾಗಿಲಿನ ಒಳಗಡೆ ಇದ್ದರೆ, ದೇಹ ಹೊರಗಡೆ ಇತ್ತು. ಬಸ್ಸು ಮುಂದಕ್ಕೆ ಹೋಗುತ್ತಿದ್ದಂತೆ ಸ್ಲಿಪ್ ಆಗಿ ಚಕ್ರದ ಅಡಿಗೆ ಬಿದ್ದು ಸಂಪಂಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಜಯನಗರ ಬಸ್ ನಿಲ್ದಾಣದಿಂದ ಎಲೆಕ್ಟ್ರಿಕ್ ಬಸ್ ಮೆಜೆಸ್ಟಿಕ್ ಕಡೆಗೆ ಹೊರಟಿತ್ತು. ಸದ್ಯ ಸ್ಥಳಕ್ಕೆ ಜಯನಗರ ಪೊಲೀಸರು ಆಗಮಿಸಿದ್ದು, ಮೃತ ಸಂಪಂಗಿಯ ಕುಟುಂಬಸ್ಥರನ್ನು ಸಂಪರ್ಕಿಸುತ್ತಿದ್ದಾರೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ!
Author: Btv Kannada
Post Views: 248







