ಇವತ್ತೇ ಬಳ್ಳಾರಿ ಜೈಲಿಗೆ ನಟ ದರ್ಶನ್​ ಶಿಫ್ಟ್​​? ಸ್ಥಳಾಂತರಕ್ಕೆ ಜೈಲಾಧಿಕಾರಿಗಳ ಸಿದ್ಧತೆ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ನ್ನು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.

ಈ ಪ್ರಕರಣದಲ್ಲಿ ಬಂಧಿತರಾಗಿ ಈ ಹಿಂದೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್‌ ರಾಜಾತಿಥ್ಯ ಪಡೆದಿದ್ದರು. ರಾಜ್ಯಾತಿಥ್ಯ ಫೋಟೋ ಕೂಡಾ ವೈರಲ್​​​​ ಆಗಿತ್ತು. ಅಷ್ಟೇ ಅಲ್ಲದೆ ದರ್ಶನ್ ಅಭಿಮಾನಿ ಜೊತೆ ವಿಡಿಯೋ ಕಾಲ್​​ನಲ್ಲಿ ಮಾತನಾಡಿದ್ದರು. ಈ ಕುರಿತು ಜೈಲಾಧಿಕಾರಿಯ ತಲೆದಂಡ ಕೂಡಾ ಆಗಿತ್ತು. ಹಾಗಾಗಿ ಈ ಬಾರಿ ದರ್ಶನ್​​​ಗೆ ಯಾವ ರಾಜ್ಯಾತಿಥ್ಯ ನೀಡದಂತೆ ಸುಪ್ರೀಂ ಕೋರ್ಟ್ ಖಡಕ್​​ ಸೂಚನೆ ನೀಡಿತ್ತು.

ಸದ್ಯ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಸಿದ್ಧತೆ ನಡೆಯುತ್ತಿದ್ದು, ಈಗಾಗ್ಲೇ ಜೈಲಾಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಳ್ತಿದ್ದಾರೆ. ಇಂದು ರಾತ್ರೋರಾತ್ರಿಯೇ ದರ್ಶನ್​ನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ​​ ಸಾಧ್ಯತೆಯಿದೆ.

ಇದನ್ನೂ ಓದಿ : ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ – ಯಾರಿಗೆಲ್ಲಾ ಸಿಕ್ತು ಚಾನ್ಸ್?

Btv Kannada
Author: Btv Kannada

Read More