ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೂ ಬಾಡೂಟ ಹಾಕುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿತ್ತು. ಬಿಬಿಎಂಪಿಯ ಈ ಕ್ರಮವು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಿಲಿಕಾನ್ ಸಿಟಿಯ ಬೀದಿ ನಾಯಿಗಳಿಗೆ ಬಿಬಿಎಂಪಿ ಮತ್ತೊಂದು ಆಫರ್ ಕೊಡ್ತಿದೆ.
ಹೌದು.. ರಾಜಧಾನಿಯ ಬೀದಿನಾಯಿಗಳನ್ನ ನಿಯಂತ್ರಣ ಮಾಡೋಕೆ ಟ್ರೈನರ್ ಬರ್ತಾರೆ ಅನ್ನೋ ಸುದ್ದಿ ಕೇಳಿಬಂದಿದೆ. ನಗರದಲ್ಲಿ ಇರೋ ಡೆಡ್ಲಿ ನಾಯಿಗಳಿಗೆ ಟ್ರೈನಿಂಗ್ ಕೊಡ್ತರಂತೆ. ಪೊಲೀಸ್ ನಾಯಿಗಳಿಗೆ ಟ್ರೈನಿಂಗ್ ಮಾಡ್ತಿದ್ದ ಟ್ರೈನರ್ ಮೂಲಕ ಬೀದಿನಾಯಿಗಳನ್ನ ನಿಯಂತ್ರಣ ಮಾಡೋಕೆ ಬಿಬಿಎಂಪಿ ಪ್ಲಾನ್ ಮಾಡಿದೆ.
ಬೌಬೌ ಗ್ಯಾಂಗ್ನಿಂದ ಹಲವರಿಗೆ ಗಾಯಗಳಾಗಿದ್ದು, ಇತ್ತ ನಾಯಿಗಳ ಕಾಟಕ್ಕೆ ಬ್ರೇಕ್ ಹಾಕಿ ಅಂದ್ರೆ ಬಿಬಿಎಂಪಿ ಕ್ಯಾರೇ ಅನ್ನುತ್ತಿಲ್ಲ. ಆದ್ರೆ ಬೀದಿನಾಯಿಗಳು ಅಟ್ಯಾಕ್ ಮಾಡಿದ್ರೆ ಅವುಗಳ ವರ್ತನೆ ಪತ್ತೆ ಹಚ್ಚಿ ಟ್ರೈನಿಂಗ್ ಕೊಡೋಕೆ ಪಾಲಿಕೆ ಮುಂದಾಗಿದೆ. BBMP ಈ ನಡೆಗೆ ಸಿಟಿಜನರು ಸಿಟ್ಟಿಗೆದ್ದಿದ್ದಾರೆ. ಮಾಡೋ ಕೆಲಸ ಮಾಡಿ ಅಂದ್ರೆ ಏನೇನೋ ಪ್ಲಾನ್ ಮಾಡಲು ಹೊರಟ ಬಿಬಿಎಂಪಿ ನಡೆಗೆ ಜನರು ಗರಂ ಆಗಿದ್ದಾರೆ.
ಇದನ್ನೂ ಓದಿ : ‘ಕಾಂತಾರ ಚಾಪ್ಟರ್ 1’ರ ಮತ್ತೊಂದು ಪಾತ್ರ ರಿವೀಲ್ – ‘ಕುಲಶೇಖರ’ನಾದ ಖ್ಯಾತ ನಟ ಗುಲ್ಶನ್ ದೇವಯ್ಯ!







