ಚೆನ್ನೈ : ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಹೊಸೂರು ಬಳಿ ನಡೆದಿದೆ.

ಮಧುರೈನಿಂದ ಬೆಂಗಳೂರಿಗೆ ಬರುತ್ತಿದ್ದ ಈ ಬಸ್‌ನಲ್ಲಿ ಬಹುತೇಕ ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಕರುಕಂಪಟ್ಟಿ ಬಳಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಬಿದ್ದಿದೆ.
ಪರಿಣಾಮ ಬಸ್‌ನಲ್ಲಿದ್ದ 40 ಮಂದಿ ಗಾಯಗೊಂಡಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನ ಹೊಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಉತ್ತನಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : 10 ವರ್ಷದಲ್ಲಿ ಮೋದಿ ಸರ್ಕಾರದಿಂದ 130 ಲಕ್ಷ ಕೋಟಿ ಸಾಲ – ಲೋಕಸಭೆಯಲ್ಲಿ ಮಾಹಿತಿ ಬಿಚ್ಚಿಟ್ಟ ಸಚಿವೆ ನಿರ್ಮಲಾ ಸೀತಾರಾಮನ್!
Author: Btv Kannada
Post Views: 273







