ಬೆಂಗಳೂರು : ಇದೊಂಥರಾ ಡಿಫರೆಂಟ್ ಕೇಸ್. ಅರ್ಥ ಮಾಡ್ಕೊಳ್ಳೋಕೆ ಸ್ವಲ್ಪ ಕಷ್ಟ ಆಗಬಹುದು. ಆದ್ರೆ, BTV ಈ ಕೇಸ್ನ ಅಂದರ್ ಕೀ ಬಾತ್ ರಿವೀಲ್ ಮಾಡ್ತಿದೆ ನೋಡಿ.
ಬೆಂಗಳೂರಿನ ಗಾಂಧಿಬಜಾರ್ನಲ್ಲಿರುವ ಜಂಬೋಕಿಂಗ್ ಅಂಗಡಿಗೆ ಆಗಸ್ಟ್ 10ನೇ ತಾರೀಕು ತಡರಾತ್ರಿ ಹೆಲ್ಮೆಟ್ ಧರಿಸಿ ಲಾಂಗ್ ಹಿಡಿದು ಎಂಟ್ರಿ ಕೊಟ್ಟ ಕಿಡಿಗೇಡಿಯೋರ್ವ, ಹಿಂದೆ-ಮುಂದೆ ನೋಡದೇ ಇಡೀ ಅಂಗಡಿಯನ್ನ ಪುಡಿಗೈತಾನೆ. ಗ್ಲಾಸ್, ಕಂಪ್ಯೂಟರ್, ಕ್ಯಾಶ್ ಕೌಂಟರ್ ಎಲ್ಲವನ್ನೂ ಧ್ವಂಸ ಗೊಳಿಸುತ್ತಾನೆ. ಆ ಬಳಿಕ ಕ್ಷಣ ಮಾತ್ರದಲ್ಲಿ ಸ್ಥಳದಿಂದ ಬೈಕ್ ಏರಿ ಎಸ್ಕೇಪ್ ಆಗ್ತಾನೆ.

ಇದೀಗ ಆ ಕಿಡಿಗೇಡಿ ಬಸವನಗುಡಿ ಪೊಲೀಸರ ಕೈಗೆ ತಗಲ್ಲಾಕ್ಕೊಂಡಿದ್ದಾನೆ. ಆತನ ಹೆಸರೇ ಆಸಿಫ್ ಪಾಷಾ. ಈ ಆಸಿಫ್ ಪಾಷಾ ಕಲಾಸಿಪಾಳ್ಯ ಠಾಣೆಯ ಮೋಸ್ಟ್ ವಾಂಟೆಡ್ ಕಳ್ಳ. ಇದೀಗ ಜಂಬೋಕಿಂಗ್ ಅಂಗಡಿಯನ್ನು ಧ್ವಂಸಗೊಳಿಸದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಫೋಟಕ ಮಾಹಿತಿಯೊಂದು ಗೊತ್ತಾಗಿದ್ದು, ಕಳ್ಳ ಆಸಿಫ್ ಪಾಷಾ ಖಾಕಿ ಮುಂದೆ ‘ಇದೆಲ್ಲ ಹಣಕ್ಕಾಗಿ ಮಾಡ್ದೇ’ ಅಂತ ಪುಂಗಿದ್ದಾನೆ.

ಹೀಗಾಗಿ ಜಂಬೋಕಿಂಗ್ ಅಂಗಡಿ ಧ್ವಂಸಗೊಳಿರುವ ಹಿಂದೆ ಕಾಣದ ವ್ಯಕ್ತಿಗಳ ಕೈವಾಡವಿದ್ದು, ಜಂಬೋಕಿಂಗ್ ಅಂಗಡಿ ಮೇಲಿನ ದ್ವೇಷಕ್ಕೆ ಸುಪಾರಿ ನೀಡಿರೋ ಶಂಕೆ ವ್ಯಕ್ತವಾಗಿದೆ. ಹೌದು.. ಜಂಬೋಕಿಂಗ್ ಇತ್ತೀಚೆಗೆ ಓಪನ್ ಆಗಿರುವಂತಹ ಶಾಪ್. ಪಿಜ್ಜಾ ಬರ್ಗರ್ ಸಿಗುವಂತಹ ಅಂಗಡಿ ಇದಾಗಿದ್ದು, ನೂರಾರು ಜನ ಕಿಕ್ಕಿರಿದು ಬಂದು ಇಲ್ಲಿ ಆಹಾರ ಸೇವಿಸುತ್ತಾರೆ.

ಆದ್ರೆ, ಜಂಬೋಕಿಂಗ್ ಶಾಪ್ ಸುತ್ತಮುತ್ತಲಿನ ಜಾಗದಲ್ಲಿ ಮತ್ತೊಂದು ಪಿಜ್ಜಾ ಬರ್ಗರ್ ಮಾರೋ ಅಂಗಡಿ ಇತ್ತಂತೆ. ಜಂಬೋಕಿಂಗ್ ಬಂದಾಗಿಂದ ಆ ಶಾಪ್ನಲ್ಲಿ ಬರ್ಗರ್ ಸೇಲಾಗ್ತಿರ್ಲಿಲ್ವಂತೆ. ಅದಕ್ಕೆ ಆ ಬರ್ಗರ್ ಶಾಪ್ನ ಮಾಲೀಕ ಕಳ್ಳ ಆಸಿಫ್ ಪಾಷಾನಿಗೆ ಸುಪಾರಿ ಕೊಟ್ಟಿದ್ನಂತೆ. ಹೀಗಾಗಿ ಕಳ್ಳ ಆಸಿಫ್ ನೀಟಾಗಿ ಹೋಗಿ ಜಂಬೋಕಿಂಗ್ನಲ್ಲಿ ದಾಂಧಲೆ ಸೃಷ್ಟಿಸಿದ್ದಾನಂತೆ.

ಸದ್ಯ ಕಳ್ಳ ಆಸಿಫ್ ಸುಪಾರಿ ವಿಚಾರವನ್ನ ಮಾತ್ರ ಬಾಯ್ಬಿಡ್ತಿಲ್ಲ. ಖಾಕಿ ಟ್ರೀಟ್ಮೆಂಟ್ ಯಾಕೋ ಕಮ್ಮಿಯಾಗಿ ಆಸಿಫ್ ಬಾಯ್ಬಿಟ್ಟಿಲ್ಲ ಎನ್ನಲಾಗಿದೆ. ಇನ್ನೂ ಸ್ಪಲ್ಪ ಆಸಿಫ್ನನ್ನ ಡ್ರಿಲ್ ಮಾಡಿದ್ರೆ ಆ ಸುಪಾರಿ ಬರ್ಗರ್ ಕಿಂಗ್ ಅರೆಸ್ಟ್ ಆಗೋದು ಪಕ್ಕಾ ಎನ್ನಲಾಗಿದೆ.



ಇದನ್ನೂ ಓದಿ : ಹಾವೇರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ.. ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ!







