ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ SIT ತನಿಖೆಯ ಪ್ರಗತಿಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಇಂದು ಸದನದಲ್ಲಿ ಮಹತ್ವದ ಉತ್ತರ ನೀಡಿದ್ದಾರೆ.
ಇದರಲ್ಲಿ ಅವರು ಹಲವು ವಿಚಾರಣೆಗಳ ಬಗ್ಗೆ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ. ಅಗೆದಲ್ಲಿ ಸಿಕ್ಕಿದ್ದೇನು? ತನಿಖೆ ಮುಂದೆ ಹೇಗೆ ಎಂಬ ಬಗ್ಗೆಯೂ ಅವರು ವಿವರಗಳನ್ನು ನೀಡಿದ್ದಾರೆ.
SIT ತನಿಖೆ ನಡೆಸಿರುವ ಸ್ಥಳಗಳಲ್ಲಿ ಈವರೆಗೆ 2 ಜಾಗಗಳ ಪೈಕಿ ಒಂದರಲ್ಲಿ ಅಸ್ಥಿಪಂಜರ ಸಿಕ್ಕಿದೆ. ಅದನ್ನು ಎಫ್‌ಎಸ್ಎಲ್‌ಗೆ ಕಳುಹಿಸಲಾಗಿದೆ. ಮತ್ತೊಂದು ಸ್ಥಳದಲ್ಲಿ ಮೂಳೆಗಳು ಸಿಕ್ಕಿವೆ. ಅದನ್ನು ಕೂಡ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಅನಾಮಿಕ ದೂರುದಾರ ತೋರಿಸಿದ ಎಲ್ಲಾ ಸ್ಥಳಗಳಲ್ಲಿ ಮಣ್ಣಿನ ಮಾದರಿಯನ್ನು ಕೂಡ ಸಂಗ್ರಹ ಮಾಡಲಾಗಿದೆ ಹಾಗೂ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅಸ್ಥಿಪಂಜರದ ವಿಶ್ಲೇಷಣೆ ಆಗಬೇಕು. ಪ್ರತಿಯೊಂದು ಸ್ಥಳಗಳಲ್ಲೂ ಮಾದರಿಗಳನ್ನು ಸಂಗ್ರಹ ಮಾಡಲಾಗಿದ್ದು, ಇದನ್ನೂ ವಿಶ್ಲೇಷಣೆಗೆ ಒಳಪಡಿಸಬೇಕು. ವಿಶ್ಲೇಷಣೆ ಆದ ಬಳಿಕವಷ್ಟೇ ತನಿಖೆ ಶುರುವಾಗುತ್ತದೆ. ಎಫ್‌ಎಸ್ಎಲ್ ವರದಿ ಇನ್ನೂ ಬಂದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಇದನ್ನೂ ಓದಿ : ಅಸ್ಥಿಪಂಜರ ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್.. ಧರ್ಮಸ್ಥಳ ಕೇಸ್ ಬಗ್ಗೆ ಸದನದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪರಮೇಶ್ವರ್!







