ಸಿಎಂ ಮೇಲೆ ಕೊಲೆ ಆರೋಪ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ – ಸದನದಲ್ಲಿ ಗುಡುಗಿದ ಗೃಹ ಸಚಿವ ಪರಮೇಶ್ವರ್!

ಬೆಂಗಳೂರು : ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದವರ ವಿರುದ್ದ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸದನದಲ್ಲಿ ಗುಡುಗಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯ ಬಳಿಕ ವಿಪಕ್ಷ ನಾಯಕ ಆರ್. ಅಶೋಕ್ ಮಾಡಿದ ಪ್ರಸ್ತಾಪದ ಹಿನ್ನೆಲೆಯಲ್ಲಿ ನಡೆದ ಚರ್ಚೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, “ಸರ್ಕಾರ ಅಷ್ಟೊಂದು ಅಸಹಾಯಕವಾಗಿಲ್ಲ. ಆ ವ್ಯಕ್ತಿಯನ್ನು ದೊಡ್ಡವನು ಮಾಡೋದು ಬೇಡ. ಆ ವ್ಯಕ್ತಿಯ ವಿರುದ್ಧ ಹತ್ತಾರು ಕೇಸ್ ಇದೆ. ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಬಿಡಲು ಸಾಧ್ಯವಿಲ್ಲ. ಕಾನೂನು ಚಲಾಯಿಸುತ್ತೇವೆ, ಅವರಿಗೆ ಏನು ಶಿಕ್ಷೆ ಕೊಡಿಸಬೇಕು ಅದನ್ನು ಕೊಡಿಸುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅನಾಮಿಕನ ಆರೋಪದಲ್ಲಿ ಸತ್ಯಾಂಶವಿಲ್ಲ.. ಸರ್ಕಾರವೇ ಷಡ್ಯಂತ್ರದ‌ ಭಾಗವಾಗಿದೆ ಎಂಬ ಸಂದೇಹ ಇದೆ – ಸಿ.ಟಿ ರವಿ ಆರೋಪ!

Btv Kannada
Author: Btv Kannada

Read More