ಅನಾಮಿಕನ ಆರೋಪದಲ್ಲಿ ಸತ್ಯಾಂಶವಿಲ್ಲ.. ಸರ್ಕಾರವೇ ಷಡ್ಯಂತ್ರದ‌ ಭಾಗವಾಗಿದೆ ಎಂಬ ಸಂದೇಹ ಇದೆ – ಸಿ.ಟಿ ರವಿ ಆರೋಪ!

ಬೆಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಈಗ ತೀರ್ವ ಸ್ವರೂಪ ಪಡೆದುಕೊಂಡಿದೆ. ಎಸ್‌ಐಟಿ ತನಿಖೆಯಲ್ಲಿ ಈವರೆಗೆ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ.

ಇದೀಗ ಈ ಬಗ್ಗೆ ವಿಧಾನಸೌಧದ ಕೆಂಗಲ್​ ಗೇಟ್ ಬಳಿ ಮಾತನಾಡಿದ MLC ಸಿ.ಟಿ.ರವಿ ಅವರು ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.  ಧರ್ಮಸ್ಥಳ ಗ್ರಾಮದ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ. ನಿಷ್ಪಕ್ಷಪಾತ ತನಿಖೆ ಆಗಬೇಕು. ಅನಾಮಿಕ ದೂರುದಾರನ ಆರೋಪದಲ್ಲಿ ಸತ್ಯಾಂಶವಿಲ್ಲ ಇದೊಂದು ವ್ಯವಸ್ಥಿತ ಪಿತೂರಿ.. ಇದರಲ್ಲಿ ಷಡ್ಯಂತ್ರ‌ ನಡೀತಿದೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಕೆಲವು ಸಾಮಾಜಿಕ ಮಾಧ್ಯಮಗಳು ಇದರಲ್ಲಿ ಶಾಮೀಲಾಗಿವೆ. ರಾಜ್ಯ ಸರ್ಕಾರವೇ ಷಡ್ಯಂತ್ರದ‌ ಭಾಗವಾಗಿದೆ ಎಂಬ ಸಂದೇಹ ಇದೆ ಎಂದು ವಿಧಾನಸೌಧದ ಕೆಂಗಲ್​ ಗೇಟ್ ಬಳಿ MLC ಸಿ.ಟಿ.ರವಿ ಆರೋಪ ಮಾಡಿದ್ಧಾರೆ.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ಆರೋಪ – ಮಾಜಿ ಶಾಸಕ ಭಗವಾನ್ ಶರ್ಮಾ ವಿರುದ್ದ ಬೆಂಗಳೂರಲ್ಲಿ FIR!

Btv Kannada
Author: Btv Kannada

Read More