ಬೆಂಗಳೂರು : ಉತ್ತರಪ್ರದೇಶದ ಮಾಜಿ ಶಾಸಕ ಭಗವಾನ್ ಶರ್ಮಾ ವಿರುದ್ದ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಂಗಳೂರು ಏರ್ಪೋರ್ಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

40 ವರ್ಷದ ಸಂತ್ರಸ್ತ ಮಹಿಳೆ ಕೊಟ್ಟ ದೂರಿನನ್ವಯ ಉತ್ತರಪ್ರದೇಶದ ಮಾಜಿ ಶಾಸಕ ಭಗವಾನ್ ಶರ್ಮಾ ಮೇಲೆ ಅತ್ಯಾಚಾರ ಕೇಸ್ ದಾಖಲಿಸಲಾಗಿದೆ. ರಿಜಿಸ್ಟಾರ್ ಮ್ಯಾರೇಜ್ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಭಗವಾನ್ ಶರ್ಮಾ, ಏರ್ಪೋರ್ಟ್ ಬಳಿಯ ಖಾಸಗಿ ಹೋಟೆಲ್ಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಇನ್ನೂ ಮಹಿಳೆಯ ಪೋಟೋ, ವಿಡಿಯೋವನ್ನೂ ಚಿತ್ರಿಕರಿಸಿರುವ ಭಗವಾನ್ ಶರ್ಮಾ, ನಂತರ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿರೋ ಆರೋಪ ಕೂಡ ಕೇಳಿಬಂದಿದೆ.
ಇದನ್ನೂ ಓದಿ : ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ – ಹೆಬ್ಬಾಳ ಫ್ಲೈಓವರ್ ಲೋಕಾರ್ಪಣೆಗೊಳಿಸಿದ ಸಿಎಂ, ಡಿಸಿಎಂ.. ನಟಿ ರಮ್ಯಾ, ಗಣ್ಯರು ಸಾಥ್!
Author: Btv Kannada
Post Views: 269







