ಈಗಲೂ ಕೆಟ್ಟ ಕಮೆಂಟ್ಸ್ ಬರ್ತಿದ್ಯಾ? ಮತ್ತೆ ದರ್ಶನ್ ಫ್ಯಾನ್ಸ್​ ಬಗ್ಗೆ ಮಾತನಾಡಿದ ನಟಿ ರಮ್ಯಾ.. ಏನಂದ್ರು ಗೊತ್ತಾ?

ಮೋಹಕ ತಾರೆ ನಟಿ ರಮ್ಯಾ ಅವರಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್​​ಗಳು ಬಂದಿದ್ದವು. ಅವರೆಲ್ಲರೂ ದರ್ಶನ್ ಅಭಿಮಾನಿಗಳು ಎಂದು ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಮ್ಯಾ ಸೈಬರ್ ಪೊಲೀಸ್ ಠಾಣೆಗೆ ಹೋಗಿ 43 ಅಕೌಂಟ್​ಗಳ ವಿರುದ್ಧ ದೂರು ದಾಖಲಿಸಿದ್ದರು. ಆ ಬೆನ್ನಲ್ಲೇ ಸೈಬರ್ ಕ್ರೈಮ್ ಪೊಲೀಸರು ಆರೋಪಿಗಳನ್ನು ಅರೆಸ್ಟ್​ ಮಾಡುತ್ತಿದ್ದಾರೆ.

ಇದೀಗ ಈ ಬಗ್ಗೆ ಖಾಸಗಿ ಶೋರೂಂ ಒಂದರ ಉದ್ಘಾಟನೆಗೆ ಆಗಮಿಸಿ ಸಂದರ್ಭ ಸುದ್ದಿಗಾರರೊಂದಿಗೆ ಮಾತಾಡಿದ ನಟಿ ರಮ್ಯಾ, ಈಗ ಕೆಟ್ಟ ಕಾಮೆಂಟ್​ಗಳು ಬರ್ತಿಲ್ಲ. ಹೆಣ್ಣು ಮಕ್ಕಳಿಗೆ ಧೈರ್ಯ ಬಂದಿದೆ. ಐ ಫೀಲ್ ಲೈಕ್ ಒಳ್ಳೆಯದಾಗಿದೆ. ಎಷ್ಟೋ ಜನ ಫೋನ್ ಸ್ವಿಚ್ ಆಫ್ ಮಾಡಿ‌ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ನಾನು ಹೇಳೋದು ಇಷ್ಟೇ ಜೀವನದಲ್ಲಿ ಏನಾದ್ರೂ ಒಳ್ಳೆದು ಮಾಡಿ. ಮಹಿಳೆಯರಿಗೆ, ತಂದೆ ತಾಯಿಗೆ ಗೌರವ ಕೋಡೋದನ್ನು ಕಲಿಯಿರಿ. ಒಳ್ಳೆಯ ಕೆಲಸ ಹುಡುಕಿ ಬ್ಯುಸಿಯಾಗಿರಿ ಎಂದು ನಟಿ ಬುದ್ಧಿ ಮಾತು ಹೇಳಿದ್ದಾರೆ.

ನಟ ದರ್ಶನ್ ಮತ್ತೆ ಅರೆಸ್ಟ್​ ಆಗಿರುವ​ ಬಗ್ಗೆ ಮಾತನಾಡಿದ ಅವರು, ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಅವರು ಬೆಳಿಯಬಹುದಿತ್ತು. ನಾನು ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸುತ್ತೇನೆ. ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಇನ್ನೂ, ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ದರ್ಶನ್​ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುತ್ತೀನಿ ಅಂದರು. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ಸೋಲ್ ಮೇಟ್ಸ್’ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್​!

Btv Kannada
Author: Btv Kannada

Read More