‘ಸೋಲ್ ಮೇಟ್ಸ್’ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್​!

ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆಯ, ಡಾ. ವಿಷ್ಣುವರ್ಧನ್​ರ ಅಪ್ಪಟ ಅಭಿಮಾನಿ ಪಿ.ವಿ ಶಂಕರ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಸೋಲ್ ಮೇಟ್ಸ್’ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ.

ಹಂಸಲೇಖ ಸಾಹಿತ್ಯವಿರೋ ‘ಕಿಲಕಿಲ’ ಹಾಡಿಗೆ ಅನಿರುದ್ಧ್ ಶಾಸ್ತ್ರಿ, ಅಂಕಿತಾ ಕುಂಡು ಧನಿಯಾಗಿದ್ದಾರೆ. ಸೋಲ್ ಮೇಟ್ಸ್ ಪರಿಸರ ಪ್ರೇಮಿ ಅನ್ನೋ ಟ್ಯಾಗ್ ಲೈನ್ ಇರೋ ಈ ಚಿತ್ರದಲ್ಲಿ ಇಬ್ಬರು ನಾಯಕ ನಟರು ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ.

<iframe width="560" height="315" src="https://www.youtube.com/embed/cuLXcV6HWpI?si=HwXvPYadMbBBxppw" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>

ರಂಗ್ ಬಿ. ರಂಗ್ ಖ್ಯಾತಿಯ ಶ್ರೀಜಿತ್ ಸೂರ್ಯ, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರದ ಇನಾಯತ್ ಖ್ಯಾತಿಯ ಪ್ರಸನ್ನ ಶೆಟ್ಟಿ, ಯಶ್ವಿಕಾ ನಿಷ್ಕಲ, ರಜನಿ, ಅಲ್ಮಾಸ್, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಅರುಣಾ ಬಾಲರಾಜ್, ಅರಸು ಮಹಾರಾಜ್, ಪ್ರಶಾಂತ್ ನಟನ, ಗೌತಮ್, ತಾರಕ್,ನವೀನ್ ಡಿ ಪಡೀಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ಪಿ ವಿ ಅವರು ನಿರ್ದೇಶನದ ಜೊತೆಗೆ ಜಿ. ಆರ್. ಅರ್ಚನಾ ಅವರೊಟ್ಟಿದೆ ಚಿತ್ರವನ್ನ ನಿರ್ಮಿಸಿದ್ದಾರೆ.

‘ಸೋಲ್​ಮೇಟ್ಸ್​’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಿರ್ಮಾಪಕ ಶಿಲ್ಪಾ ಶ್ರೀನಿವಾಸ್, ಉಮೇಶ್ ಬಣಕಾರ್ ಮುಂತಾದವರು ಹಾಜರಿದ್ದರು. ಈ ವೇಳೆ ನಿರ್ದೇಶಕ ಶಂಕರ್ ಮಾತನಾಡಿದರು. ಈ ಸಿನಿಮಾಗೆ ಹಂಸಲೇಖ ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ಅವರು ತಿಳಿಸಿದರು.

‘ನಾನು ಮೊದಲಿಗೆ ನೋಡಿದ ಸಿನಿಮಾ ಪುಟ್ನಂಜ. ಅಲ್ಲಿಂದ ನಾನು ಹಂಸಲೇಖ ಅಭಿಮಾನಿ. ಹಾಗಾಗಿ ನನ್ನ ಮೊದಲ ಸಿನಿಮಾಗೆ ಅವರಿಂದ ಸಂಗೀತ ನಿರ್ದೇಶನ ಮಾಡಿಸಿದ್ದೇನೆ. ಐದು ಹಾಡುಗಳನ್ನು ಅವರು ಈ ಸಿನಿಮಾಗೆ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಹುಡುಗ-ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿ ಕಥೆ ಇದೆ. ಅದು ಈಗಿನ ಸಮಾಜಕ್ಕೆ ತುಂಬ ಅವಶ್ಯಕವಾಗಿದೆ’ ಎಂದಿದ್ದಾರೆ ಶಂಕರ್ ಪಿ.ವಿ.

ಈ ಸಿನಿಮಾದಲ್ಲಿ ಶ್ರೀಜಿತ್ ಶೆಟ್ಟಿ ಅವರು ಸತ್ಯ ಎಂಬ ಪಾತ್ರ ಮಾಡಿದ್ದಾರೆ. ಭೂಮಿ ಎಂಬ ಪಾತ್ರಕ್ಕೆ ನಿಷ್ಕಲಾ ಶೆಟ್ಟಿ ಅವರು ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟ ಪ್ರಸನ್ನ ಶೆಟ್ಟಿ ಅವರು ಗೋಪಿ ಎಂಬ ಮುಗ್ಧ ಹಳ್ಳಿ ಯುವಕನ ಪಾತ್ರವನ್ನು ನಿಭಾಯಿಸಿದ್ದಾರೆ. ಇದು ಅವರ ಎರಡನೇ ಸಿನಿಮಾ.

ಇದನ್ನೂ ಓದಿ : ‘ಲ್ಯಾಂಡ್ ಲಾರ್ಡ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್​!

Btv Kannada
Author: Btv Kannada

Read More