ಧರ್ಮಸ್ಥಳ ಕ್ಷೇತ್ರದ ಪರ ನಿಂತ ರಾಜ್ಯ ಬಿಜೆಪಿ.. ಶ್ರೀ ಮಂಜುನಾಥನ ದರ್ಶನ ಪಡೆದು ಧರ್ಮಾಧಿಕಾರಿಯನ್ನು ಭೇಟಿಯಾದ ವಿಜಯೇಂದ್ರ ಟೀಂ!

ಮಂಗಳೂರು : ಧರ್ಮಸ್ಥಳದ ದೇವಾಸ್ಥಾನದ ಕುರಿತು ಅಪಪ್ರಚಾರ ಮಾಡಲಾಗ್ತಿದೆ ಅಂತಾ ಆರೋಪಿಸ್ತಿರೋ ಬಿಜೆಪಿ, ‘ಧರ್ಮಸ್ಥಳ ಚಲೋ’ಗೆ ಕರೆ ಕೊಟ್ಟಿದೆ. ಕಮಲಪಡೆ ಧರ್ಮಸ್ಥಳ ರಕ್ಷಣೆಗೆ ಮುಂದಾಗಿದ್ದು, ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ಶಾಸಕರ ತಂಡ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಮಂಜನಾಥ ಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ.

ಬಿವೈ ವಿಜಯೇಂದ್ರ ಅವರಿಗೆ ಜೊತೆ ಸಿ.ಟಿ ರವಿ, ಎಸ್.ಆರ್ ವಿಶ್ವನಾಥ್, ಛಲವಾದಿ ನಾರಾಯಣಸ್ವಾಮಿ, ಕ್ಯಾಪ್ಟನ್ ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಗುರುರಾಜ್ ಗಂಟಹೊಳೆ, ಪ್ರತಾಪ್ ಸಿಂಹ, ಹರೀಶ್ ಪೂಂಜಾ, ಕಿರಣ್ ಕುಮಾರ್ ಕೊಡ್ಗಿ, ಯಶ್ ಪಾಲ್ ಸುವರ್ಣ, ಧನಂಜಯ ಸರ್ಜಿ, ಭಾಗೀರತಿ ಮುರುಳ್ಯ, ಡಾ.ಭರತ್ ಶೆಟ್ಟಿ ಸೇರಿದಂತೆ ಅನೇಕ ಬಿಜೆಪಿ ನಾಯಕರು, ವಿಧಾನ ಪರಿಷತ್ ಸದಸ್ಯರು ಸಾಥ್ ನೀಡಿದ್ದಾರೆ. ​

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಜಯೇಂದ್ರ, ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದಾಗ ಬಿಜೆಪಿ ಸ್ವಾಗತ ಮಾಡಿದೆ. ತನಿಖೆ ಪಾರದರ್ಶಕವಾಗಿ ಆಗಬೇಕು, ಹುಟ್ಟಿರುವ ಅನುಮಾನಗಳು ಇತ್ಯರ್ಥ ಆಗಬೇಕು ಅಂತ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೆವು ಎಂದರು.

ತನಿಖೆ ನಡೆಯುವ ವೇಳೆ ಅನೇಕ ಗೊಂದಲಗಳು, ಅಪಪ್ರಚಾರ ಸಾಮಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಅಪಪ್ರಚಾರ ಬಗ್ಗೆ ಕಡಿವಾಣ ಹಾಕುವಂತಹ ಕೆಲಸ ಸರ್ಕಾರದಿಂದ ಆಗಬೇಕು. ಆದ್ರೆ ಸರ್ಕಾರ ಕಡಿವಾಣ ಹಾಕದೇ ಅಪಚಾರ ಎಸಗಿದೆ. ಕಡಿವಾಣ ಹಾಕದ ಸಿಎಂ ಈ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು. ಎಡಪಂಥೀಯವರನ್ನ ಕೇಳಿ ತನಿಖೆಗೆ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದರ ಹಿಂದೆ ಎಡಪಂಥೀಯ ಸಂಘಟನೆಗಳಿವೆ ಅಂತ ಸ್ವತಃ ದಿನೇಶ್ ಗುಂಡುರಾವ್ ಹೇಳಿದ್ದಾರೆ. ಅದು ಸತ್ಯವಾದ್ರೆ ಸಮಗ್ರ ತನಿಖೆ ಆಗ್ಲಿ. ಜೊತೆಗೆ ಡಿಕೆಶಿಯವರೇ ಇದರ ಹಿಂದೆ ಷಡ್ಯಂತ್ರ ನಡೀತಿದೆ, ಸಂದರ್ಭ ಬಂದಾಗ ಷಡ್ಯಂತ ಬಯಲಿಗೆಳೆಯುತ್ತೇವೆ ಅಂತಾ ಹೇಳಿದ್ದಾರೆ. ಯಾಕೆ ಇದಕ್ಕೆ ಇನ್ನೂ ಸಂದರ್ಭ ಬಂದಿಲ್ವಾ ಅಂತಾ ಜನತೆ ಕೇಳ್ತಿದ್ದಾರೆ..? ಷಡ್ಯಂತ್ರ ಯಾರು ಮಾಡ್ತಿದ್ದಾರೆ ಅವರನ್ನ ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡ್ತಿಲ್ಲ. ಸರ್ಕಾರ ಇದರ ಹಿಂದೆ ಇರುವವರನ್ನ ಬಯಲಿಗೆಳೆಯಬೇಕು ಅಷ್ಟೇ. ಬಿಜೆಪಿ ಮದ್ಯಂತರ ವರದಿ ನೀಡಬೇಕೆಂದು ಸದನದಲ್ಲಿ ಆಗ್ರಹಿದೆ. ಇದಕ್ಕೆ ಶೀಘ್ರದಲ್ಲೆ ಇತಿಶ್ರೀ ಹಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಭೂ ಹಗರಣ.. ಸೈನಪ್ಸಿ ಕಂಪನಿ MD ಸಚಿನ್ ನಾರಾಯಣ್, ನಿರ್ಮಾಪಕ ಕೃಷ್ಣಚೈತನ್ಯ ಮತ್ತು ಸಹಚರರ ವಿರುದ್ಧ FIR!

Btv Kannada
Author: Btv Kannada

Read More