ನೆಲಮಂಗಲ : ಹಸುಗಳ ಕತ್ತು ಕೊಯ್ದು ರಸ್ತೆಯಲ್ಲಿ ಬಿಸಾಡಿದ್ದ ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್ (30) ಸೈಯದ್ ನವಾಜ್ (35) ಸೇರಿದಂತೆ ಮತ್ತೋರ್ವ ಬಂಧಿತ ಆರೋಪಿಗಳು.

ನೆಲಮಂಗಲ ತಾಲೂಕು ಅರಳಸಂದ್ರ ಗ್ರಾಮದಲ್ಲಿ ಆರೋಪಿಗಳು ಹಸುಗಳ ಕತ್ತು ಕೊಯ್ದು ರಸ್ತೆಯಲ್ಲಿ ಬಿಸಾಡಿ ಅಟ್ಟಹಾಸ ಮೆರೆದಿದ್ದರು. ಗ್ರಾಮದ ಸೇತುವೆ ಮೇಲೆ 2 ನಾಟಿ ಹಸುಗಳ ಮೃತ ದೇಹ ಪತ್ತೆಯಾಗಿತ್ತು. ಹಸು ಕತ್ತು ಕೊಯ್ದಿದ್ದು, ಮೈಯೆಲ್ಲಾ ಗಾಯದ ಗುರುತು ಕಂಡುಬಂದಿದ್ದವು.
ಈ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಸದನದಲ್ಲಿಯೂ ಚರ್ಚೆ ಆಗಿತ್ತು. ಘಟನೆ ಸಂಬಂಧ ಪ್ರಕರಣ ಕೈಗೆತ್ತಿಕೊಂಡಿದ್ದ ನೆ.ಗ್ರಾಮಾಂತರ ಪೊಲೀಸರು, ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ತನಿಖೆಗೆ ವೇಳೆ ಆರೋಪಿಗಳು ಕೇರಳಗೆ ಹಸುಗಳನ್ನ ರಫ್ತು ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಎರಡು ಹಸುಗಳು ತಿನ್ನಲು ಮಾಂಸಕ್ಕೆ ಯೋಗ್ಯವಲ್ಲ ಎಂದು ಸಾಭೀತಾದ ಹಿನ್ನೆಲೆ ನಡು ರಸ್ತೆಯಲ್ಲಿ ಹಸುಗಳ ಕತ್ತುಕೊಯ್ದು ಬಿಸಾಡಿದ್ದರು. ಸದ್ಯ ಪ್ರಕರಣದಲ್ಲಿ ಮೂವರನ್ನ ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : 1 ಲಕ್ಷ ಲಂಚ ಪಡೆಯುತ್ತಿದ್ದಾಗ ‘ಲೋಕಾ’ ಟ್ರ್ಯಾಪ್.. ರಾಮಮೂರ್ತಿನಗರ ಠಾಣೆಯ ಭ್ರಷ್ಟ ಇನ್ಸ್ಪೆಕ್ಟರ್ ರಾಜಶೇಖರ್ ಸೇರಿ ಮೂವರ ಬಂಧನ!







