ಸೆಲೆಬ್ರೆಟಿಗಳಿಗೆ ಜೈಲಿಂದಲೇ ಸ್ಪೆಷಲ್​ ಮೆಸೇಜ್ ಕಳುಹಿಸಿದ ನಟ ದರ್ಶನ್.. ಪತ್ನಿ ವಿಜಯಲಕ್ಷ್ಮಿ ಪೋಸ್ಟ್​ನಲ್ಲಿ ಏನಿದೆ?​

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತೆ ಜೈಲು ಸೇರಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಆಘಾತಕ್ಕೀಡಾಗಿದ್ದಾರೆ. ದರ್ಶನ್‌ ಅಭಿನಯದ ʼದಿ ಡೆವಿಲ್‌ʼ ಚಿತ್ರದ ಬಿಡುಗಡೆ ಹೊಸ್ತಿಲಿನಲ್ಲೇ ಅವರ ಜಾಮೀನು ರದ್ದಾಗಿರುವುದು ತೀವ್ರ ನಿರಾಸೆ ತಂದಿದೆ. ಇದೀಗ ದರ್ಶನ್‌ ಅವರು ಸೆಲೆಬ್ರೆಟಿಗಳಿಗೆ ಜೈಲಿನಿಂದಲೇ ದರ್ಶನ್ ಸ್ಪೆಷಲ್​ ಮೆಸೇಜ್ ಕಳಿಸಿದ್ದಾರೆ. ಅದನ್ನ ಪತ್ನಿ ವಿಜಯಲಕ್ಷ್ಮೀ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ʼʼನಾನು ವಿಜಯಲಕ್ಷ್ಮಿ ದರ್ಶನ್. ನಿಮ್ಮ‌ ಪ್ರೀತಿಯ ದರ್ಶನ್ ಅವರು ನಿಮಗೆ ಕಳಿಸಿರುವ ಸಂದೇಶ. ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ‌ ಪ್ರೀತಿಯ ದಾಸನ ಶಿರ ಸಾಷ್ಟಾಂಗ ನಮಸ್ಕಾರಗಳು. ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ‌ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೆ ಇದ್ದರು ಹೇಗೆ ಇದ್ದರು ನಿಮ್ಮ ಶ್ರೇಯೋಭಿಲಾಷೆಯನ್ನೆ ಬಯಸುತ್ತೇನೆ.

ಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ‌ ಕನಸು ಕಂಡಿರುವ ನಿರ್ದೇಶಕರ ಹಾಗೂ ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ . ಹಾಗಾಗಿ ನನ್ನ ʼದಿ ಡೆವಿಲ್ʼ ಚಿತ್ರದ ಎಲ್ಲ ಕೆಲಸ ಕಾರ್ಯಗಳು ಯಾವುದೆ ಅಡೆತಡೆ ಇಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ದೃಢವಾಗಿ ನಂಬಿದ್ದೇನೆ. ಸಿನಿಮಾ ಒಂದು ಮನರಂಜನೆಯ ಮಾಧ್ಯಮ. ಅದನ್ನ ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು-ನಿಮ್ಮ ಪ್ರೀತಿಯ ದಾಸ ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ವಿಜಯಲಕ್ಷ್ಮೀ ಒಡೆದ ಹೃದಯದ ಪೋಸ್ಟ್‌ ಹಂಚಿಕೊಂಡಿದ್ದರು. ನಟ ದರ್ಶನ್‌ ಜೈಲಿಗೆ ತೆರಳಿರುವ ಹಿನ್ನೆಲೆಯಲ್ಲಿ, ದುಃಖಿತರಾಗಿರುವ ವಿಜಯಲಕ್ಷ್ಮೀ ಒಡೆದ ಹೃದಯದ ಎಮೋಜಿಯನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದರು. ತಮ್ಮ ಫಾರಂ ಹೌಸ್‌ನಲ್ಲಿ ದರ್ಶನ್‌ ತಾವು ಸಾಕಿದ ಪ್ರಾಣಿಗಳ ನಡುವೆ ವಾಕಿಂಗ್‌ ಮಾಡುತ್ತಿರುವ ಫೋಟೊವನ್ನು ಅವರು ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ : ಮಾಜಿ ಶಾಸಕಿ, ಡಾಕ್ಟರ್ ಅಂಜಲಿ ನಿಂಬಾಳ್ಕರ್​ಗೆ ಮಹತ್ವದ ಹುದ್ದೆ.. ಉತ್ತರಾಖಂಡ್ ವೀಕ್ಷಕರಾಗಿ ನೇಮಿಸಿದ AICC!

Btv Kannada
Author: Btv Kannada

Read More