ಕಾದಿದ್ದು ಸಾಕು.. ಬಿಗ್​ ಬಾಸ್ ಈಸ್ ಬ್ಯಾಕ್ – ಸೀಸನ್ 12ರ ಲೋಗೋ ರಿಲೀಸ್!

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಳಯಾಳಂ ಭಾಷೆಯಲ್ಲಿ ಬಿಗ್​ ಬಾಸ್ ಹೊಸ ಸೀಸನ್​ಗೆ ವೇದಿಕೆ ರೆಡಿಯಾಗುತ್ತಿದ್ದು,  ‘ಬಿಗ್ ಬಾಸ್’ ಪ್ರಿಯರಿಗೆ ಈಗ ಬಿಗ್ ಸರ್ಪ್ರೈಸ್‌ ಸಿಕ್ಕೇಬಿಟ್ಟಿದೆ.

ಹೌದು.. 79ನೇ ಸ್ವಾತಂತ್ರ್ಯ ದಿನಾಚರಣೆಯಂದು ‘ಬಿಗ್ ಬಾಸ್‌’ ಫ್ಯಾನ್ಸ್‌ಗೆ ದೊಡ್ಡ ಅಪ್‌ಡೇಟ್‌ ಲಭಿಸಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ 12’ರ ಲೋಗೋ ಲಾಂಚ್ ಪ್ರೋಮೋ ಬಿಡುಗಡೆಯಾಗಿದೆ.

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಲೋಗೋದಲ್ಲಿ ಬೆಂಕಿ ಹಾಗೂ ನೀರು ಇತ್ತು. ಅದೇ ಥೀಮ್ ಮೇಲೆ ಸ್ವರ್ಗ ವರ್ಸಸ್ ನರಕ ಕಾನ್ಸೆಪ್ಟ್ ಪರಿಚಯ ಮಾಡಲಾಯಿತು. ಇದೀಗ ಹೊಚ್ಚ ಹೊಸ ಸೀಸನ್ ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಲೋಗೋದಲ್ಲಿ ಗಡಿಯಾರ ಇದೆ. ಲೋಗೋದ ಕಣ್ಣಿನಲ್ಲೇ 12 ಎಂದು ಡಿಸೈನ್ ಮಾಡಿರೋದು ಮತ್ತೊಂದು ವಿಶೇಷ.

ಪ್ರತಿ ಸೀಸನ್‌ಗೂ ಆಯಾ ಕಾನ್ಸೆಪ್ಟ್ ಮೇಲೆ ಲೋಗೋ ಡಿಸೈನ್ ಆಗುತ್ತೆ. ಈ ಬಾರಿ ಲೋಗೋದಲ್ಲಿ ಗಡಿಯಾರ ಇರೋದ್ರಿಂದ ಸಮಯದ ಮೇಲೆ ಏನಾದರೂ ಕಾನ್ಸೆಪ್ಟ್‌ ಮಾಡಲಾಗಿದ್ಯಾ? ಕಣ್ಣಲ್ಲೇ ಕ್ಲಾಕ್ ಇರೋದ್ರಿಂದ ಸ್ಪರ್ಧಿಗಳಿಗೆ ಸಮಯದ ಮಹತ್ವವನ್ನ ತಿಳಿಸಿಕೊಡಲಾಗುತ್ತದಾ ಎಂಬ ಪ್ರಶ್ನೆ ವೀಕ್ಷಕರ ತಲೆಯಲ್ಲಿ ಹುಟ್ಟಿಕೊಂಡಿದೆ.

ಇದನ್ನೂ ಓದಿ : ಸುಕೇಶ್ ಶೆಟ್ಟಿ ನಿರ್ದೇಶನದ ‘ಪೀಟರ್’ ಫಸ್ಟ್ ಲುಕ್ ರಿಲೀಸ್ – ಪಾತ್ರಗಳೇ ಈ ಚಿತ್ರದ ಹೈಲೈಟ್!

Btv Kannada
Author: Btv Kannada

Read More