ದುನಿಯಾ ವಿಜಯ್‌ ಜೊತೆಯಾದ ಡೇರ್‌ ಡೆವಿಲ್‌ ಹೀರೋ – ಇಂಡಸ್ಟ್ರಿಯಲ್ಲಿ ಕಿಚ್ಚು ಹಚ್ಚಲು ಬರ್ತಿದ್ದಾರೆ ನಟ ಶಿಶಿರ್‌ ಬೈಕಾಡಿ! ‌

ಕನ್ನಡ ಸಿನಿಮಾರಂಗದಲ್ಲಿ ಸದ್ಯ ಯಂಗ್‌ ಹೀರೋಗಳ ಪರ್ವ ಶುರುವಾಗಿದೆ. ಹೊಸ ನಾಯಕ ನಟರು ಹಾಗೂ ಕಲಾವಿದರು ತಮ್ಮದೇ ಸ್ಟೈಲ್‌ ಆಫ್‌ ಆಕ್ಟಿಂಗ್​ನಿಂದಾಗಿ ಇಂಡಸ್ಟ್ರಿಗೆ ಎಂಟ್ರಿಕೊಡ್ತಿದ್ದಾರೆ. ಅಂತದ್ದೇ ಸಾಲಿನಲ್ಲಿ ನಿಲ್ಲೋ ನಟ ಶಿಶಿರ್‌ ಬೈಕಾಡಿ. ಮೊದಲ ಸಿನಿಮಾದಲ್ಲಿಯೇ ಅದ್ಭುತವಾಗಿ ಆಕ್ಟ್‌ ಮಾಡಿ ಪ್ರೇಕ್ಷಕರಿಂದ ಮಾತ್ರವಲ್ಲದೇ ಸಿನಿಮಾ ಇಂಡಸ್ಟ್ರಿಯಿಂದಲೂ ಸೈ ಎನ್ನಿಸಿಕೊಂಡ ಕಲಾವಿದ.

ಡೇರ್‌ ಡೆವಿಲ್‌ ಮುಸ್ತಾಫ ಸಿನಿಮಾದ ಅಭಿನಯ ಕಂಡು ಶಿಶಿರ್‌ ಅವರಿಗೆ ಇಂಡಸ್ಟ್ರಿ ಕಡೆಯಿಂದ ಒಳ್ಳೆ ಅವಕಾಶಗಳೇ ಅರಸಿ ಬಂದಿದೆ. ಡೇರ್‌ ಡೆವಿಲ್‌ ಚಿತ್ರದ ನಂತರ ದುನಿಯಾ ವಿಜಯ್‌ ಅಭಿನಯದ ‘ಲ್ಯಾಂಡ್‌ ಲಾರ್ಡ್‌’ ಸಿನಿಮಾದಲ್ಲಿ ಶಿಶಿರ್‌ ಉತ್ತಮ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಕ್ಲಾಸ್‌ ಪಾತ್ರಗಳು ಮಾತ್ರವಲ್ಲದೆ ಮಾಸ್‌ ಹಾಗೂ ಕಮರ್ಷಿಯಲ್‌ ಸಿನಿಮಾಗೂ ಶಿಶಿರ್‌ ಸೂಟ್‌ ಆಗ್ತಾರೆ ಅನ್ನೋದನ್ನು ಪ್ರೂವ್ ಮಾಡೋದಕ್ಕೆ ಈ ಸಿನಿಮಾ ಮೂಲಕ ಚಾನ್ಸ್‌ ಸಿಕ್ಕಿದೆ. ಬಿಡುಗಡೆ ಆಗಿರೋ ಶಿಶಿರ್‌ ಪೋಸ್ಟರ್​ನಲ್ಲಿರೋ ಲುಕ್‌ ಕೂಡ ಸಖತ್‌ ಮಾಸ್‌ ಅಂಡ್‌ ಇಂಪ್ರೆಸಿವ್‌ ಆಗಿದೆ.

ಉತ್ತಮ ಸ್ಟಾರ್‌ ಕಾಸ್ಟ್‌ ಇರುವ ಲ್ಯಾಂಡ್‌ ಲಾರ್ಡ್‌ ಚಿತ್ರದಲ್ಲಿ ಶಿಶಿರ್‌ ಅಭಿನಯ ಮಾಡುತ್ತಿದ್ದು, ಕಾಟೇರ ಸಿನಿಮಾಗೆ ಕಥೆ ಬರೆದಿದ್ದ ಜಡೇಶ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ದರ್ಶನ್‌ ಅವರ ಸಾರಥಿ ಸಿನಿಮಾ ನಿರ್ಮಾಣ ಮಾಡಿದ್ದ ಕೆವಿ ಸತ್ಯಪ್ರಕಾಶ್‌ ಅವರೆ ಲ್ಯಾಂಡ್‌ ಲಾರ್ಡ್‌ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮಾತ್ರವಲ್ಲದೇ ಪ್ಯಾನ್‌ ಇಂಡಿಯಾ ಮಟ್ಟದ ಸಿನಿಮಾದಲ್ಲಿ ಗುರುತಿಸಿಕೊಂಡಿರೋ ಸ್ಟಾರ್‌ ನಟ, ನಿರ್ದೇಶಕ, ನಿರ್ಮಾಪಕರ ಸಿನಿಮಾದಲ್ಲೂ ಶಿಶಿರ್‌ ಬೈಕಾಡಿ ಅಭಿನಯ ಮಾಡಿದ್ದು, ಶೀಘ್ರದಲ್ಲೇ ಆ ಸಿನಿಮಾ ಅನೌನ್ಸ್‌ ಮಾಡಲಿದೆ ಸಿನಿಮಾ ಟೀಂ.

ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮಾಡ್ತಿರೋ ಶಿಶಿರ್‌ ಕಾಲಿವುಡ್‌ ಅಂಗಳಕ್ಕೂ ಕಾಲಿಟ್ಟಿದ್ದಾರೆ. ತಮಿಳು ಸಿನಿಮಾ ಒಂದರ ಮಾತುಕಥೆ ಮುಗಿಸಿದ್ದು ಪ್ರಿಪ್ರೊಡಕ್ಷನ್​ನಲ್ಲಿ ಸಿನಿಮಾ ಟೀಂ ಬ್ಯುಸಿ ಆಗಿದೆ. ಒಟ್ನಲ್ಲಿ ಒಂದು ಸಿನಿಮಾದ ಉತ್ತಮ ಅಭಿನಯದಿಂದ ಶಿಶಿರ್‌ ಸಾಲು ಸಾಲು ಸಿನಿಮಾಗಳ ಜೊತೆಗೆ ಒಂದಿಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ಶಿಶಿರ್‌ ಬೈಕಾಡಿ ಇಂಡಸ್ಟ್ರಿಯಲ್ಲಿ ಉತ್ತಮ ಕಲಾವಿದನಾಗಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಇದನ್ನೂ ಓದಿ : ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆ ಮೇಲೆ ED ದಾಳಿ – 1.68 ಕೋಟಿ ರೂ. ನಗದು, 6ಕೆಜಿ ಚಿನ್ನಾಭರಣ ವಶಕ್ಕೆ!

Btv Kannada
Author: Btv Kannada

Read More