ಬೆಂಗಳೂರು : ಬೆಂಗಳೂರಿನ ಸಿ. ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದ ಮಲ್ಲೇಶ್ ಪಾಳ್ಯದಲ್ಲಿರುವ ಮೆಡಿಹೋಪ್ ಹಾಸ್ಪಿಟಲ್ನ ಕರ್ಮಕಾಂಡ ಬಟಾಬಯಲಾಗಿದೆ. ಅಮಿತ್ ಅಗರ್ವಾಲ್ ಎಂಬಾತ ತನ್ನ ಹಾಸ್ಪಿಟಲ್ನ ಸಿಬ್ಬಂದಿಯನ್ನ ಕ್ರೂರವಾಗಿ ನಡೆಸಿಕೊಳ್ತಾನೆ. ಈತನ ಹಾಸ್ಪಿಟಲ್ನಲ್ಲಿರುವ ಡಾಕ್ಟರ್ಗಳಿಗೆ ಪೇಮೆಂಟ್ ಕೊಡಲ್ಲ. ಸಿಸ್ಟರ್ಸ್ಗಳಿಗೆ ಉಳಿಗಾಲವೇ ಇಲ್ಲ. ಇನ್ನು ಹೌಸ್ ಕೀಪಿಂಗ್ ಕೆಲಸಕ್ಕಿರೋರಿಗೆ ನರಕ ತೋರಿಸ್ತಿದ್ದಾನೆ. ಅಷ್ಟೇ ಅಲ್ಲದೆ ಅಮಿತ್ ಅಗರ್ವಾಲ್ ಬಾಯಿಗೆ ಬಂದಂತೆ ಬೈದು ಜಾತಿ ನಿಂದನೆ ಕೂಡ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೀಗ ಅಮಿತ್ ಅಗರ್ವಾಲ್ ಮೇಲೆ ಬೈಯಪ್ಪನಹಳ್ಳಿ ಠಾಣೆಯಲ್ಲಿ FIR ದಾಖಲಾಗಿದೆ.

ವಂಚಕ ಅಮಿತ್ ಅಗರ್ವಾಲ್ ಮೇಲೆ ಮೆಡಿಹೋಪ್ ಹಾಸ್ಪಿಟಲ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ನಾಗರಾಜ್ ಎಂಬುವವರು ದೂರು ನೀಡಿದ್ದಾರೆ. ಅಮಿತ್ ಅಗರ್ವಾಲ್, ನಾಗರಾಜ್ ಅವರಿಗೆ ವರ್ಷಾನುಗಟ್ಟಲೆ ಕಿರುಕುಳ ಕೊಟ್ಟಿದ್ದ. ಅಮಿತ್ ಹಾಸ್ಪಿಟಲ್ ಸಿಬ್ಬಂದಿ ಒಬ್ಬರ ಬ್ಲ್ಯಾಂಕ್ ಚೆಕ್ನ್ನು ಪಡೆದು ಅವರ ಮೇಲೆಯೇ ಚೆಕ್ ಬೌನ್ಸ್ ಕೇಸ್ ಹಾಕಿದ್ದಾನಂತೆ. ಇನ್ನು ಹಾಸ್ಪಿಟಲ್ಗೆ ಇನ್ವೆಸ್ಟ್ ಮಾಡಿ ಅಂತ ಪಾರ್ಟ್ನರ್ಗಳಿಗೆ 2 ಕೋಟಿ ದೋಖಾ ಮಾಡಿದ್ದಾನೆ. ಕಣ್ಣಿಗೆ ಸಿಕ್ಕಿದವರನ್ನ ಸುಲಿಗೆ ಮಾಡೋ ಕೆಲಸವೇ ಅಮಿತ್ ಅಗರ್ವಾಲನದ್ದು, ನೈಟ್ನಲ್ಲಿ ಟೈಟಾಗಿ ಸ್ಟೆಪ್ ಹಾಕೋ ಖಯಾಲಿ ಕೂಡ ಅಮಿತ್ಗೆ ಇದೆ.

ಅಮಿತ್ ಅಗರ್ವಾಲ್ ರಜನಿಗಂಧ, RMD ಬಾಯಲ್ಲಿದ್ರಷ್ಟೇ ಆಪರೇಷನ್ ಥಿಯೇಟರ್ಗೆ ಕಾಲಿಡ್ತಾನಂತೆ. ಈತ ಹಾರೆ, ಗುದ್ದಲಿ, ಪಿಕಾಸಿಗೆ ಕೈಮುಗೀತಾನೆ. ಇನ್ನು ಈ ಅಮಿತ್ ಕಟ್ಟಿರೋ ಅಪಾರ್ಟ್ಮೆಂಟ್ ಕೂಡ ಬೋಗಸ್. ವಂಚಕ ಅಮಿತ್ ಅಗರ್ವಾಲ್ ರೂಲ್ಸೇ ಇಲ್ಲದೆ ಅಪಾರ್ಟ್ಮೆಂಟ್ ಕಟ್ಟಿದ್ದಾನೆ. ದೊಮ್ಮಲೂರಲ್ಲಿ ವಿಂಡ್ಚಿಮ್ ಎಂಬ ಅಪಾರ್ಟ್ಮೆಂಟ್ ಕಟ್ಟಿ ರೂಲ್ಸ್ ವೈಲೆಟ್ ಮಾಡಿದ್ದಾನೆ. ಯಾವ್ದೇ ಓಸಿ.ಸಿಸಿ ಇಲ್ದೇ ಆಗಸದೆತ್ತರಕ್ಕೆ ಅಪಾರ್ಟ್ಮೆಂಟ್ ಕಟ್ಟಿದ್ದಾನೆ. ಫೈಯರ್ ಡಿಪಾರ್ಟ್ಮೆಂಟ್ನಿಂದ ಕೂಡ ವಂಚಕ ಅಮಿತ್ ಯಾವ್ದೇ ಕ್ಲಿಯರೆನ್ಸ್ ತೆಗೆದುಕೊಂಡಿಲ್ಲ. ಯಾರಾದ್ರು ಪ್ರಶ್ನೆ ಮಾಡಿದ್ರೆ ನನಗೆ ಊರಲ್ಲಿರೋ ಹೈಫೈ ವ್ಯಕ್ತಿಗಳೇ ಗೊತ್ತು ಅಂತ ಬೆದರಿಸ್ತಾನೆ.
ಅಮಿತ್ ಅಗರ್ವಾಲ್ ಮಾಡಿರೋ ವಂಚನೆ ಒಂದಲ್ಲಾ.. ಎರಡಲ್ಲಾ.. ಹಾಗಾಗಿ ಈತನ ಅಕ್ರಮ ಅಪಾರ್ಟ್ಮೆಂಟ್ ನೆಲಕ್ಕುರುಳಲೇ ಬೇಕು. KPME ಲೈಸೆನ್ಸ್ ಇಲ್ಲದೇ ಇರೋ ಮೆಡಿಹೋಪ್ ಹಾಸ್ಪಿಟಲ್ಗೆ ಬೀಗ ಹಾಕ್ಲೇ ಬೇಕು. ಇದೀಗ ಅಮಿತ್ ಅಗರ್ವಾಲ್ ಮೆಡಿಹೋಪ್ ಹಾಸ್ಪಿಟಲ್ನನ್ನು ಬೇರೊಬ್ಬರಿಗೆ ವಹಿಸಿಕೊಟ್ಟಿದ್ದಾನೆ. ಮೆಡಿಹೋಪ್ ಹೆಸರನ್ನ ಚೇಂಜ್ ಮಾಡಿ ಮೆಡ್ರೆ ಅನ್ನೋ ಹೆಸರಲ್ಲಿ ಈಗ ನಡೆಸಲಾಗ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳೇ ಕಣ್ಮುಚ್ಚಿ ಕೂತ್ಕೋಬೇಡಿ, ಮೆಡಿಹೋಪ್ @ ಮೆಡ್ರೆ ಕರ್ಮಕಾಂಡಕ್ಕೆ ಆದಷ್ಟು ಬೇಗ ಬ್ರೇಕ್ ಹಾಕಿ. ಈತನಿಗೆ ಜೈಲುಹಾದಿ ತೋರಿಸಿ, ಯಾರ್ಯಾರು ಅಮಿತ್ನಿಂದ ನೊಂದಿದ್ದಾರೋ ಅವ್ರೆಲ್ಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿ.


ಇದನ್ನೂ ಓದಿ : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟ – ಮೂರು ಮನೆಗಳು ಛಿದ್ರ ಛಿದ್ರ.. 7 ಮಂದಿಗೆ ಗಂಭೀರ ಗಾಯ!







