ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ನ ನ್ಯಾ.ಜೆ.ಬಿ.ಪರ್ದಿವಾಲಾ, ಆರ್.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಆದೇಶ ಹೊರಬಿದ್ದಿದ್ದು, ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಂದೇ ಸರೆಂಡರ್ ಆಗಬೇಕಿದೆ. ಇಲ್ಲವೇ ತಕ್ಷಣವೇ ಅವರನ್ನು ಬಂಧಿಸಲಾಗುತ್ತೆ. ಹಾಗೆಯೇ ಈ ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್ಗಳು ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ.
ಸದ್ಯ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದ ದರ್ಶನ್ಗೆ ಬಿಗ್ ಶಾಕ್ ಎದುರಾಗಿದ್ದು, ಮತ್ತೆ ನಟ ಜೈಲು ಪಾಲಾಗ್ತಿದ್ದಾರೆ. ದರ್ಶನ್ ಜೊತೆ ಪವಿತ್ರಾ ಗೌಡ, A6, ಜಗದೀಶ್ ಅಲಿಯಾಸ್ ಜಗ್ಗ, A7 ಅನುಕುಮಾರ್ ಅಲಿಯಾಸ್ ಅನು, ಎ14 ಪ್ರದೂಶ್, ಎ11 ನಾಗರಾಜು ಅಲಿಯಾಸ್ ನಾಗ, ಎ12 , ಲಕ್ಷ್ಮಣ್ ಜಾಮೀನು ಕೂಡ ರದ್ದಾಗಿದ್ದು, ಇವರುಗಳು ಕೂಡ ಸೆರವಾಸ ಅನುಭವಿಸಲಿದ್ದಾರೆ.
‘ಹೈಕೋರ್ಟ್ ಆದೇಶದಲ್ಲಿ ದೋಷ’ : ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ಕೆಲ ಕಾರಣಗಳಿಂದ ಜಾಮೀನು ನೀಡಿದ್ದಾರೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಜೈಲಲ್ಲಿ ಐಷಾರಾಮಿ ಜೀವನ ನಡೆಸಿದ ದರ್ಶನ್ ಬಗ್ಗೆಯೂ ಸುಪ್ರೀಂ ಕಿಡಿಕಾರಿದ್ದು, ಜೈಲು ಸೂಪರಿಂಟೆಂಡ್ನನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಸುಪ್ರೀಂ ಹೇಳಿದೆ. ಹಾಗೆಯೇ ಆರೋಪಿಗಳಿಗೆ ಜೈಲಿನಲ್ಲಿ ಫೈವ್ ಸ್ಟಾರ್ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್ ಎಂದು ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ ಕೊಟ್ಟಿದೆ. ಜೈಲಿಗೆ ಹೋದ ನಂತರ ಆರೋಪಿ ಸಾಮಾನ್ಯ ಕೈದಿಯಂತೆ ಇರಬೇಕು. ಈ ಮುಂಚೆ ದರ್ಶನ್ಗೆ ಫೈವ್ ಸ್ಟಾರ್ ಟ್ರೀಟ್‌ಮೆಂಟ್ ಕೊಡಲಾಗಿದೆ. ಇನ್ಮುಂದೆ ಸಾಮಾನ್ಯ ಕೈದಿಯಂತೆ ಇರಬೇಕು.
ರಾಜ್ಯ ಸರ್ಕಾರ ಯಾರಿಗಾದರೂ ಫೈವ್ ಸ್ಟಾರ್ ಟ್ರೀಟ್‌ಮೆಂಟ್ ನೀಡುತ್ತಿರುವ ಛಾಯಾಚಿತ್ರಗಳು ಅಥವಾ ಯಾವುದೇ ವೀಡಿಯೊವನ್ನು ನಾವು ನೋಡಿದರೆ ಮೊದಲು ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.
ಇದನ್ನೂ ಓದಿ : ದರ್ಶನ್ ಸೇರಿ 7 ಆರೋಪಿಗಳ ಬೇಲ್ ಕ್ಯಾನ್ಸಲ್ – ಸುಪ್ರೀಂ ಕೋರ್ಟ್ನಿಂದ ಮಹತ್ವದ ಆದೇಶ.. ‘ದಾಸ’ ಮತ್ತೆ ಜೈಲು ಪಾಲು!







