ಬೆಂಗಳೂರು : ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ ತನಿಖೆ ಮಾಡಿ ಸಿಸಿಬಿ, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಕೊಲೆಯಾದ ಓಂ ಪ್ರಕಾಶ್ ಮಗಳ ಹೆಸರನ್ನ ಕೈಬಿಟ್ಟು ಚಾರ್ಜ್‌ಶೀಟ್ ಮಾಡಲಾಗಿದೆ.
ಓಂಪ್ರಕಾಶ್ ಕೊಲೆಯಾದ ಬಳಿಕ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಓಂಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಮಗಳ ವಿರುದ್ಧ ದೂರು ದಾಖಲಿಸಲಾಗಿತ್ತು. ಎಫ್‌ಐಆರ್‌ನಲ್ಲಿ ಓಂಪ್ರಕಾಶ್ ಪತ್ನಿ ಪಲ್ಲವಿಯನ್ನ ಎ1 ಆರೋಪಿ, ಮಗಳನ್ನ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು.
ಇದೀಗ ತನಿಖೆಯ ವೇಳೆ ಓಂಪ್ರಕಾಶ್ ಹತ್ಯೆಯಲ್ಲಿ ಮಗಳ ಪಾತ್ರ ಇಲ್ಲ ಅನ್ನೋದು ಕಂಡು ಬಂದಿದೆ. ಹೀಗಾಗಿ, ತಂದೆಯ ಮರ್ಡರ್ ಕೇಸ್‌ನಲ್ಲಿ ಎ2 ಆರೋಪಿಯಾಗಿದ್ದ ಮಗಳನ್ನ ಚಾರ್ಜ್ ಶೀಟ್‌ನಿಂದ ಕೈಬಿಡಲಾಗಿದ್ದು, ಕ್ಲೀನ್ ಚಿಟ್ ಕೊಡಲಾಗಿದೆ.
ಸಿಸಿಬಿ 1,150 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಕೊಲೆಗೆ ಪ್ರಮುಖವಾದ ಕಾರಣ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯ ವಿಚಾರ ಎಂದು ಉಲ್ಲೇಖ ಮಾಡಿದೆ. ಪ್ರಕರಣದ ತನಿಖೆ ಮುಂದುವರೆಸಲು ಕೊಲೆಯಾದ ಡಿಜಿ-ಐಜಿಪಿ ಮಗ ಕಾರ್ತಿಕೇಶ್, ಸರ್ಕಾರದಿಂದ ಅನುಮತಿ ಪಡೆದು ಸ್ವಂತ ಖರ್ಚಿನಲ್ಲಿ ಎಸ್‌ಪಿಪಿಯನ್ನ ನೇಮಕ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ : ಟ್ರಂಪ್ ಸುಂಕಾಸ್ತ್ರದಿಂದ ಗುಜರಾತ್ನ ವಜ್ರೋದ್ಯಮಕ್ಕೆ ಭಾರೀ ಹೊಡೆತ.. ಬರೋಬ್ಬರಿ 1 ಲಕ್ಷ ಕಾರ್ಮಿಕರು ಕೆಲಸದಿಂದ ವಜಾ!







