ಟ್ರಂಪ್ ಸುಂಕಾಸ್ತ್ರದಿಂದ ಗುಜರಾತ್​​ನ​ ವಜ್ರೋದ್ಯಮಕ್ಕೆ ಭಾರೀ ಹೊಡೆತ.. ಬರೋಬ್ಬರಿ 1 ಲಕ್ಷ ಕಾರ್ಮಿಕರು ಕೆಲಸದಿಂದ ವಜಾ!

ಅಹಮದಾಬಾದ್ : ಏಪ್ರಿಲ್‌ನಲ್ಲಿ ಅಮೆರಿಕವು ಶೇ.10ರಷ್ಟು ಮೂಲ ಸುಂಕವನ್ನು ವಿಧಿಸಿದಾಗಿನಿಂದ ವಜ್ಯೋದ್ಯಮಕ್ಕೆ ಹೆಸರಾದ ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ ಸುಮಾರು 1 ಲಕ್ಷ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ.

ಇದಲ್ಲದೆ, ಶೇ.10ರಷ್ಟು ಇದ್ದ ಸುಂಕವನ್ನು ಮೊದಲು ಶೇ.25ಕ್ಕೆ ಏರಿಸಿ ನಂತರ ಈಗ ಶೇ.50ಕ್ಕೆ ದ್ವಿಗುಣ ಗೊಳಿಸಲಾಗಿದೆ. ಹೀಗಾಗಿ 10 ದಿನಗಳಲ್ಲಿ ವಜಾಗೊಳಿವಿಕೆ ತೀವ್ರಗೊಡಿದೆ ಎಂದು ಗುಜರಾತ್‌ನ ವಜ್ರ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ಭವೇಶ್‌ ಟಂಕ್ ಅವರು ಹೇಳಿದ್ದಾರೆ.

ಭಾವನಗರ, ಅಮೇಲಿ ಮತ್ತು ಜುನಾಗಢದ ಸಣ್ಣ ಘಟಕಗಳಲ್ಲಿ ಹೆಚ್ಚಿನ ಉದ್ಯೋಗ ನಷ್ಟ ಸಂಭವಿಸಿದೆ. ಇವು ಸಾಮಾನ್ಯವಾಗಿ ಒರಟು ವಜ್ರಗಳನ್ನು ಕತ್ತರಿಸಲು ಮತ್ತು ಹೊಳಪು ಮಾಡಲುದೊಡ್ಡಕಂಪನಿಗಳಿಂದ ಉದ್ಯೋಗ ವನ್ನು ತೆಗೆದುಕೊಳ್ಳುತ್ತವೆ. ಅಮೆರಿಕದ ಖರೀದಿದಾರರಿಂದ ಬರುವ ಅನೇಕ ರಫ್ತು ಆದೇಶಗಳು ಸುಂಕ ಹೇರಿಕೆ ಕಾರಣ ವಿಳಂಬವಾಗಿವೆ ಅಥವಾ ರದ್ದುಗೊಂಡಿವೆ. ಹೀಗಾಗಿ ಮಾಸಿಕ ಸುಮಾರು 15,000 20,000 ರೂ. ವೇತನ ಪಡೆಯುತ್ತಿದ್ದ ಕಾರ್ಮಿಕರನ್ನು ವಜಾ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

‘ಸೌರಾಷ್ಟ್ರ, ಜುನಾಗಢ, ಭಾವನಗರ ಮತ್ತು ಅಮೇಲಿಯಲ್ಲಿ ಹರಡಿರುವ ಘಟಕಗಳು ಒಟ್ಟಾರೆ 3-4 ಲಕ್ಷ ಜನರನ್ನು ನೇಮಿಸಿಕೊಂಡಿವೆ. ಈಗ ಅಮೆರಿಕ ಸುಂಕವು ವಜ್ರ ವ್ಯಾಪಾರದಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ, ಅಂದಿನಿಂದ, ಕತ್ತರಿಸುವುದು ಮತ್ತು ಹೊಳಪು ನೀಡುವ ಕೆಲಸಗಳು ಬತ್ತಿಹೋಗಿವೆ ಮತ್ತು ಕಾರ್ಮಿಕರಿಗೆ ಬಾಗಿಲು ತೋರಿಸಲಾಗಿದೆ’ ಎಂದು ಟಂಕ್ ಹೇಳಿದ್ದಾರೆ.

ಇದನ್ನೂ ಓದಿ : ಕೃತಕ ಬುದ್ದಿಮತ್ತೆ : ಭಾರತದ 100 ಪ್ರಭಾವಿ ವ್ಯಕ್ತಿಗಳಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ 9ನೇ ಸ್ಥಾನ!

Btv Kannada
Author: Btv Kannada

Read More