ಹಾವೇರಿ : ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ತಾಲೂಕಿನ ನಜೀಕ ಲಕಮಾಪುರ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಪತ್ನಿ ಲಲಿತವ್ವ ಕೊಲೆಯಾದ ಮಹಿಳೆ. 60 ವರ್ಷದ ಸಿದ್ದಪ್ಪ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡವ. ಸಿದ್ದಪ್ಪನಿಗೆ ಮೊದಲಿನಿಂದಲೂ ಕುಡಿತದ ಚಟ ಇದ್ದು, ನಿನ್ನೆ ರಾತ್ರಿ ಗಂಡ-ಹೆಂಡ್ತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಈ ದುರಂತ ಸಂಭವಿಸಿದೆ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ವಿಶ್ವ ಹಿಂದೂ ಪರಿಷತ್ ಪತ್ರಿಕಾ ಹೇಳಿಕೆ ಬಿಡುಗಡೆ!
Author: Btv Kannada
Post Views: 284







