ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ‘ಆಪರೇಷನ್‌ ಅಖಲ್‌’.. ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ!

ಶ್ರೀನಗರ : ಜಮ್ಮು-ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ʻಆಪರೇಷನ್‌ ಅಖಲ್‌ʼ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆಗೀಡಾಗಿದ್ದಾನೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ʻಆಪರೇಷನ್‌ ಅಖಲ್‌ʼ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿತ್ತು.

ಅರಣ್ಯ ಪ್ರದೇಶ ಸುತ್ತುವರಿದು ಶೋಧ ಆರಂಭಿಸಿದ ಭದ್ರತಾ ಪಡೆಗಳು ಇದೀಗ ಓರ್ವ ಉಗ್ರನನ್ನ ಹತ್ಯೆಗೈದಿವೆ ಎಂದು ತಿಳಿದುಬಂದಿದೆ. ʻಆಪರೇಷನ್‌ ಅಖಲ್‌ʼ ಮುಂದುವರಿದಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ ತಿಳಿಸಿದೆ.

ಇದನ್ನೂ ಓದಿ : ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ದೋಷಿ.. ಇಂದು ಕೋರ್ಟ್​ನಿಂದ ಶಿಕ್ಷೆ ಪ್ರಮಾಣ ಪ್ರಕಟ!

Btv Kannada
Author: Btv Kannada

Read More