ಬೆಂಗಳೂರು : ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಿಡಿಗೇಡಿಗಳನ್ನು ಸೈಬರ್ ಕ್ರೈಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲಾರ, ಚಿತ್ರದುರ್ಗ ಮೂಲದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಈ ಮೂವರು ಅಶ್ಲೀಲ ಕಮೆಂಟ್ ಹಾಕಿ ನಟಿಗೆ ಸವಾಲ್ ಹಾಕಿದ್ದರು. ಇದೀಗ ಐಪಿ ಅಡ್ರೆಸ್ ಆಧರಿಸಿ ಮೂವರನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಟಿ ರಮ್ಯಾ ದೂರು ದಾಖಲಿಸುವ ವೇಳೆ 43 ಅಕೌಂಟ್‍ಗಳ ಹೆಸರು ಉಲ್ಲೇಖಿಸಿ ದೂರು ದಾಖಲಿಸಿದ್ದರು. ನಂತರ ಪೊಲೀಸರ ಮುಂದೆ ಹೇಳಿಕೆ ನೀಡುವ ವೇಳೆ ಮತ್ತೆ ಐದು ಅಕೌಂಟ್‍ಗಳನ್ನು ಸೇರಿಸಿ 48 ಅಕೌಂಟ್‍ಗಳ ಮೇಲೆ ದೂರು ದಾಖಲಿಸಿದ್ದರು. ಎಫ್‍ಐಆರ್ ದಾಖಲಾದ ತಕ್ಷಣ ಬಹುತೇತ ಅಕೌಂಟ್‍ಗಳು ಡಿಲಿಟ್ ಆಗಿದ್ದವು. ಅಷ್ಟರಲ್ಲಿ ಪೊಲೀಸರು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದು ಐಪಿ ಅಡ್ರೆಸ್‍ಗಳು ಅಕೌಂಟ್ ಡಿಟೇಲ್ಸ್ ಕೊಡುವಂತೆ ಮನವಿ ಮಾಡಿದ್ದರು.
ಪೊಲೀಸರ ಮನವಿಯಂತೆ ಸಂಬಂಧಪಟ್ಟ ಸಂಸ್ಥೆಗಳು ಡಿಲಿಟ್ ಆಗಿದ್ದ ಅಕೌಂಟ್‍ಗಳ ಎಲ್ಲಾ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ನೀಡಿವೆ. ಇದೀಗ ಅಶ್ಲೀಲ ಕಮೆಂಟ್ ಹಾಕಿ, ಅಕೌಂಟ್ ಡಿಲಿಟ್ ಮಾಡಿ ಆರಾಮಾಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಆ ಮೂಲಕ ಪ್ರಕರಣದ ತನಿಖೆ ಆರಂಭವಾಗ್ತಿದ್ದಂತೆ ಮೂವರನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ : ನಟ ಪವನ್ ಕಲ್ಯಾಣ್ ಸಿನಿಮಾ ಫ್ಲಾಪ್.. ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ ‘ಹರಿಹರ ವೀರಮಲ್ಲು’!







