ಚಿಕ್ಕಮಗಳೂರು : ಕುಡಿದ ಮತ್ತಲ್ಲಿ ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ!

ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ. 52 ವರ್ಷದ ಭವಾನಿ ಮೃತ ದುರ್ದೈವಿ. 28 ವರ್ಷದ ಪವನ್ ಆರೋಪಿ.

ತಾಯಿಯನ್ನು ಕೊಲೆ ಮಾಡಿದ ಬಳಿಕ ಮಗ ಮೃತದೇಹಕ್ಕೆ ಬೆಂಕಿ ಹಚ್ಚಿ ಪಕ್ಕದಲ್ಲೇ ಮಲಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ನಂತರ ಆಲ್ದೂರು ಪೊಲೀಸರು ತಕ್ಷಣವೇ ಪವನ್‌ನನ್ನು ಬಂಧಿಸಿದ್ದಾರೆ.

ಆಲ್ದೂರು ಪಿಎಸ್‌ಐ ಮತ್ತು ಇನ್‌ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ತುಮಕೂರು : ವಿವಾಹಿತನ ಪ್ರೀತಿ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ!

Btv Kannada
Author: Btv Kannada

Read More