ತುಮಕೂರು : ವಿವಾಹಿತನ ಪ್ರೀತಿ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ!

ತುಮಕೂರು : ವಿವಾಹಿತ ವ್ಯಕ್ತಿಯೋರ್ವನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗ್ಯಾರಹಳ್ಳಿ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಭಾವನಾ ಆತ್ಮಹತ್ಯೆಗೆ ಶರಣಾದ ಯುವತಿ.

ವಿವಾಹಿತ ನವೀನ್ ಎಂಬಾತ ಭಾವನಾಗೆ ಪ್ರೀತಿಸುವಂತೆ ಕಿರುಕುಳ ನೀಡ್ತಿದ್ದ. ಇದರಿಂದ ಬೇಸತ್ತು ಭಾವನಾ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಭಾವನಾ ಮೈಸೂರಿನಲ್ಲಿ ನರ್ಸಿಂಗ್ ಓದುತ್ತಿದ್ದಾಗ ಆಕೆಯ ಖರ್ಚಿಗೆ ಬೇಕಾದ ಹಣವನ್ನು ತಂದೆ, ನವೀನ್ ಮೂಲಕ ಫೋನ್ ಪೇ, ಗೂಗಲ್ ಪೇ ಮಾಡಿಸುತ್ತಿದ್ದರು. ಆದರೆ ನವೀನ್ ಮೊಬೈಲ್ ನಂಬರ್​ನ್ನು ದುರ್ಬಳಕೆ ಮಾಡಿಕೊಂಡು ಪ್ರೀತಿಸುವಂತೆ ಭಾವನಾಗೆ ಕಿರುಕುಳ ನೀಡುತ್ತಿದ್ದ. ಮದುವೆಯಾಗಿ ಮಕ್ಕಳನ್ನು ಹೊಂದಿರುವ ನವೀನ್​ ಪ್ರೀತಿಗೆ ಭಾವನಾ ವಿರೋಧ ವ್ಯಕ್ತಪಡಿಸಿದ್ದಳು. ಹಾಗಾಗಿ ನೀನು ಪ್ರೀತಿ ಮಾಡದಿದ್ರೆ ರೈಲಿಗೆ ಸಿಲುಕಿ ಸಾಯೋದಾಗಿಯೂ ನವೀನ್ ಬೆದರಿಕೆ ಹಾಕಿದ್ದ.

ಕಳೆದ 15 ದಿನಗಳ ಹಿಂದೆ ಭಾವನಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಳು. ಇದೀಗ ನೆಲಮಂಗಲದ ಚಿಕ್ಕಮ್ಮನ ಮನೆಯಲ್ಲಿ ನೇಣು ಬಿಗಿದುಕೊಂಡು ಭಾವನಾ ಸೂಸೈಡ್ ಮಾಡಿಕೊಂಡಿದ್ದಾಳೆ. ಈ ಸಂಬಂಧ ಭಾವನಾ ಪೋಷಕರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಸ್ಕೇಪ್​ ಆಗಿರುವ ಆರೋಪಿ ನವೀನ್ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕಿರುತೆರೆಗೂ ಕಾಲಿಟ್ಟ ‘ಜೋಗಿ’ ಸಿನಿಮಾ ನಿರ್ಮಾಪಕರು.. ‘ಸುವರ್ಣ ಸಂಕಲ್ಪ ಅಮೃತಘಳಿಗೆ’ಗೆ ಅಶ್ವಿನಿ ರಾಮ್ ಪ್ರಸಾದ್ ನೇತೃತ್ವ!

Btv Kannada
Author: Btv Kannada

Read More