ತುಮಕೂರು : ಪತ್ನಿ ಸ್ನೇಹಿತನ ಜೊತೆ ಎಸ್ಕೇಪ್ ಆಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್‌ನಲ್ಲಿ ನಡೆದಿದೆ. 35 ವರ್ಷದ ನಾಗೇಶ್ ಮೃತ ವ್ಯಕ್ತಿ.
12 ವರ್ಷದ ಹಿಂದೆಯೇ ರಂಜಿತಾ ಮತ್ತು ನಾಗೇಶ್ ಪ್ರೀತಿಸಿ ಮದುವೆಯಾಗಿದ್ರು. ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದ್ರೆ ರಂಜಿತಾ ಈಗ ಪ್ರೀತಿಸಿ ಮದುವೆಯಾದ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಮನೆಬಿಟ್ಟು ಪರಾರಿಯಾಗಿದ್ದಾಳೆ. ಇದರಿಂದ ಮನನೊಂದು ನಾಗೇಶ್, ನನ್ನ ಸಾವಿಗೆ ಪತ್ನಿ ರಂಜಿತಾ, ಸ್ನೇಹಿತ ಭರತ್ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.
ನಾಗೇಶ್ ಸ್ನೇಹಿತ ಭರತನಿಗೆ ರಂಜಿತಾ ಪರಿಚವಾಗಿದ್ದು, ಬಳಿಕ ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ. ನಂತರ ರಂಜಿತಾ ಭರತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಆದ್ರೆ, ಇದೀಗ ಇಬ್ಬರು ಮಕ್ಕಳನ್ನು ಬಿಟ್ಟು ಭರತ್ ಜೊತೆ ಪರಾರಿಯಾಗಿದ್ದಾಳೆ. ಈ ಘಟನೆದಿಂದ ಮನನೊಂದ ನಾಗೇಶ್, ಮನನೊಂದಿದ್ದಾರೆ. ಅಲ್ಲದೇ ಹೆಂಡ್ತಿ ಹೀಗೆ ಬೇರೊಬ್ಬರನ ಜೊತೆ ಓಡಿಹೋಗಿದ್ದಾಳೆಂಬ ಮರ್ಯಾದೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : http://ಫ್ರೆಂಡ್ ಜೊತೆ ಹೆಂಡ್ತಿ ಲವ್ವಿ-ಡವ್ವಿ.. ಗಂಡನಿಗೆ ಕೈ ಕೊಟ್ಟು ಎಸ್ಕೇಪ್ ಆಗಿದ್ದಕ್ಕೆ ಪತಿ ಸೂಸೈಡ್!
