ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳು ಹೂತಿಟ್ಟ ಕೇಸ್​ – ನೇತ್ರಾವತಿ ನದಿ ತೀರದಲ್ಲಿ SITಯಿಂದ ಸ್ಥಳ ಮಹಜರ್!

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳು ಹೂತಿಟ್ಟ ಪ್ರಕರಣದ ತನಿಖೆ ಮುಂದುವರೆದಿದ್ದು, ಇದೀಗ SIT ತಂಡ ನೇತ್ರಾವತಿ ನದಿ ತೀರದಲ್ಲಿ ಸ್ಥಳ ಮಹಜರ್ ಆರಂಭಿಸಿದೆ.

ಸ್ಥಳ ಮಹಜರ್ ವೇಳೆ ನೇತ್ರಾವತಿ ನದಿ ತೀರದಲ್ಲಿ SIT ತಂಡದ ಜೊತೆ FSL ತಂಡವೂ ಭಾಗಿಯಾಗಿದ್ದು, SIT ತಂಡದ IPS ಅಧಿಕಾರಿ ಜಿತೇಂದ್ರ ಕುಮಾರ್ ಅವರು​​ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ದೂರುದಾರನನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದಿದ್ದು, ನೇತ್ರಾವತಿ ನದಿ ತೀರ ಸೀಜ್​ ಮಾಡಿ 200ಕ್ಕೂ ಹೆಚ್ಚು ಪೊಲೀಸರು, ಪೊಲೀಸ್ ಸಿಬ್ಬಂದಿಗಳಿಂದ ಭದ್ರತೆ ಸ್ಥಳ ಮಹಜರ್ ಮಾಡುತ್ತಿದ್ದಾರೆ. ಇನ್ನು SIT ಟೀಂ ಸ್ಥಳದಲ್ಲೇ ಅನಾಮಿಕ ವ್ಯಕ್ತಿಯಿಂದ ಮಾಹಿತಿ ಪಡೆಯುತ್ತಿದೆ.

ಈ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಧರ್ಮಸ್ಥಳ ಗ್ರಾಮದಲ್ಲಿ SIT ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಎಸ್ಐಟಿ ತಂಡ ನಿನ್ನೆ ಧರ್ಮಸ್ಥಳಕ್ಕೆ ಹೋಗಿದೆ, ವಿಚಾರಣೆ ಮಾಡ್ತಿದೆ. SIT ತನಿಖೆ ಮಾಡಿ ವರದಿ ಕೊಡೋವರೆಗೂ ನಾವು ಮಧ್ಯ ಪ್ರವೇಶಿಸಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ದೆವ್ವದ ಕಥಾನಕ ಫೌಂಡ್ ಫೂಟೇಜ್ “ಓಮೆನ್” ಚಿತ್ರದ ಟ್ರೈಲರ್ ರಿಲೀಸ್!

Btv Kannada
Author: Btv Kannada

Read More