ಬೆಂಗಳೂರು : ಮಿನಿ ಕ್ಯಾಂಟರ್ವೊಂದು ಬೈಕ್ ಮೇಲೆ ಹತ್ತಿ ನಿಂತ ಘಟನೆ ಬೆಂಗಳೂರಿನ ಶ್ರೀನಿವಾಸ್ಪುರ ಕ್ರಾಸ್ ಬಳಿ ನಡೆದಿದೆ. ಲಾರಿಯ ಚಕ್ರದಡಿ ಸಿಲುಕಿದ್ರೂ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಈ ಅಪಘಾತ ಇಂದು ಬೆಳಿಗ್ಗೆ 8:30ಕ್ಕೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಶ್ರೀನಿವಾಸ್ಪುರ ಕ್ರಾಸ್ ಬಳಿ ಮಿನಿ ಕ್ಯಾಂಟರ್ ಎಡಕ್ಕೆ ತಿರುಗುವಾಗ ಪಕ್ಕದಲ್ಲಿದ್ದ ಸ್ಕೂಟರ್ ಗಮನಿಸದೆ ಚಾಲಕ ಕ್ಯಾಂಟರ್ನ್ನು ಚಲಾಯಿಸಿದ್ದಾನೆ. ಈ ವೇಳೆ ಕ್ಯಾಂಟರ್ ಸಂಪೂರ್ಣ ಸ್ಕೂಟರ್ ಮೇಲೆ ಹತ್ತಿ ಸ್ವಲ್ಪ ದೂರು ಕ್ರಮಿಸಿದ್ದು, ತಕ್ಷಣ ಕ್ಯಾಂಟರ್ ನಿಲ್ಲಿಸಿದ್ದರಿಂದ ಮಹಿಳೆ ಬಚಾವಾಗಿದ್ದಾಳೆ.

ಗಾಯಾಳು ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಕ್ಯಾಂಟರ್ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ಕ್ಯಾಂಟರ್ ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ಕ್ಯಾಂಟರ್ ಚಾಲಕನ ವಿರುದ್ಧ ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.
ಇದನ್ನೂ ಓದಿ : ಮಲೆನಾಡಲ್ಲಿ ಭಾರೀ ಮಳೆಗೆ ಧರೆಗುರುಳಿದ ಬೃಹತ್ ಮರ : ಚಿಕ್ಕಮಗಳೂರು-ಮತ್ತೋಡಿ ರಸ್ತೆ ಸಂಚಾರ ಸಂಪೂರ್ಣ ಬಂದ್!







