ಬೆಂಗಳೂರು : ಪಿಎಸ್ಐ ದರ್ಪಕ್ಕೆ ಶಾಶ್ವತವಾಗಿ ವ್ಯಕ್ತಿಯೋರ್ವ ಕಿವುಡನಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು.. ಇಬ್ಬರು ಮನೆ ಮಾಲೀಕರ ನಡುವಿನ ಜಗಳದಲ್ಲಿ ಬಾಡಿಗೆದಾರ ಬಲಿಪಶುವಾಗಿದ್ದಾನೆ.

ಬಾಡಿಗೆದಾರ ಉದಯ ಕುಮಾರ್ (26) ಪಿಎಸ್ಐ ಪುನೀತ್ನಿಂದ ಹಲ್ಲೆಗೊಳಗಾದ ವ್ಯಕ್ತಿ. ಬೇಗೂರು ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಹಲ್ಲೆ ಮಾಡಿದ ಪರಿಣಾಮ ಉದಯ ಕುಮಾರ್ ಶ್ರವಣ ದೋಷ ಎದುರಿಸುವಂತಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ಗೆ ಬಾಡಿಗೆದಾರ ಉದಯ ಕುಮಾರ್ ಪರ ವಕೀಲರು ದೂರು ನೀಡಿದ್ದಾರೆ.

ಅನವಶ್ಯಕವಾಗಿ ಪಿಎಸ್ಐ ಪುನೀತ್ ಠಾಣೆಗೆ ಕರೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಕಪಾಳಕ್ಕೆ ಹೊಡೆದು ದೌರ್ಜನ್ಯ ಎಸಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ವೈದ್ಯಕೀಯ ಪರೀಕ್ಷೆ ವೇಳೆ ಬಾಡಿಗೆದಾರ ಉದಯ ಕುಮಾರ್ ಎಡಕಿವಿಯ ಸಂಪೂರ್ಣ ಶ್ರವಣ ಶಕ್ತಿ ಕಳೆದುಕೊಂಡಿರುವುದು ಗೊತ್ತಾಗಿದೆ. ಸದ್ಯ ಘಟನಾ ಸಂಬಂಧ ನ್ಯಾಯಕ್ಕಾಗಿ ಬಾಡಿಗೆದಾರ ಉದಯ್ ಕೋರ್ಟ್ ಮೆಟ್ಟಿಲೇರಿದ್ದಾನೆ.




ಇದನ್ನೂ ಓದಿ : ‘ಎಂಪೈರ್’ ಕಬಾಬ್ ಡೇಂಜರ್.. ಡೇಂಜರ್.. ಆರೋಗ್ಯ ಇಲಾಖೆ ವರದಿಯಲ್ಲಿ ಸ್ಪೋಟಕ ಮಾಹಿತಿ ರಿವೀಲ್ – ಎಂಥೆಂಥಾ ರೋಗ ಬರುತ್ತೆ ಗೊತ್ತಾ?







