ಬೆಂಗಳೂರು : ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ಅವರ ಚಿತ್ರ ಬಿಡುಗಡೆಗೆ ಬೆಂಗಳೂರಿನಲ್ಲಿ ಸಂಕಷ್ಟ ಎದುರಾಗಿದೆ. ಬೆಂಗಳೂರಿನಲ್ಲಿ ಪವನ್ ಕಲ್ಯಾಣ್ ಅವರು ನಟಿಸಿರುವ “ಹರಿಹರ ವೀರಮಲ್ಲು” ಎನ್ನುವ ತೆಲುಗು ಸಿನಿಮಾಗೆ ಕನ್ನಡಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡಪರ ಸಂಘಟನೆಗಳು ಪವನ್ ಕಲ್ಯಾಣ್ ಅವರ ಸಿನಿಮಾದ ಪೋಸ್ಟರ್‌ಗಳನ್ನು ಹರಿದು ಬಿಸಾಕಿದ್ದಾರೆ. ಇದಕ್ಕೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಲು ಮುಂದಾದಾಗ ಅವರನ್ನೂ ಕೂಡ ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪವನ್ ಕಲ್ಯಾಣ್ ಅವರ ಸಿನಿಮಾದ ಬ್ಯಾನರ್‌ನಲ್ಲಿ ಕನ್ನಡ ಭಾಷೆ ಇಲ್ಲದೆ ಇರುವುದಕ್ಕೆ ಹಾಗೂ ಅವರು ಇತ್ತೀಚಿಗೆ ಹಿಂದಿ ಭಾಷೆಗೆ ಬೆಂಬಲ ನೀಡಿದ್ದಕ್ಕೆ ಬೆಂಗಳೂರಿನ ಸಂಧ್ಯಾ ಚಿತ್ರಮಂದಿರದಲ್ಲಿ ‘ಹರಿಹರ ವೀರಮಲ್ಲು’ ಬ್ಯಾನರ್ನ ಹರಿದು ಬಿಸಾಕಿ ಕ್ನನಡಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಕನ್ನಡ ಮೊದಲು ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ‘ಹಿಂದಿ’ ದ್ರಾವಿಡ ಭಾಷೆಗಳ ಅಜ್ಜಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಕನ್ನಡಿಗರು ‘ಹರಿಹರ ವೀರಮಲ್ಲು’ ಸಿನಿಮಾ ಹಾಗೂ ಪವನ್ ಕಲ್ಯಾಣ್ ಅವರ ಫೋಟೋ ಇರುವ ಬ್ಯಾನರ್ ಅನ್ನು ಹರಿದು ಬಿಸಾಕಿದ್ದಾರೆ. ಸದ್ಯ ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಮಾಡದಂತೆ ಕನ್ನಡಿಗರು ಪ್ರತಿಭಟನೆ ಮಾಡುತ್ತಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ‘ಹರಿ ಹರ ವೀರ ಮಲ್ಲು’ ರಿಲೀಸ್ಗೆ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ : ದರ್ಶನ್ ಪಾಲಿಗೆ ಇಂದು ಬಿಗ್ ಡೇ – ನಟನ ಜಾಮೀನು ರದ್ದಾಗುತ್ತಾ? ಸುಪ್ರೀಂನತ್ತ ಎಲ್ಲರ ಚಿತ್ತ!







