ಬೆಂಗಳೂರಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘಿಸಿದ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಶಾಕ್ – ಸಾವಿರಾರು ರೂ. ದಂಡ.. FIR ದಾಖಲಿಸುವಂತೆ ಡಿಸಿ ಆದೇಶ!

ಬೆಂಗಳೂರು : ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್​ಗಳು, ಪುನರ್ವಸತಿ ಕೇಂದ್ರಗಳ ಒಟ್ಟು 58 ಪ್ರಕರಣಗಳನ್ನು ಮಂಡಿಸಲಾಗಿದ್ದು, ಇದರಲ್ಲಿ 14 ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ದಂಡ ವಿಧಿಸಿ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ.

ಇನ್ನು 5 ಸಂಸ್ಥೆಗಳ ವಿರುದ್ಧ FIR ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಬೆಂಗಳೂರು ವಿದ್ಯಾರಣ್ಯಪುರಂನ ಸನ್​ರೈಸ್ ಮಲ್ಟಿ-ಸ್ಪೆಶಾಲಿಟಿ ಹಾಸ್ಪಿಟಲ್, ಕೋರಮಂಗಲದ ಸರ್ವಶಕ್ತಿ ಕಂನ್​ಸಲ್ಟೇಷನ್ ಸೆಂಟರ್, ಸಿಕೆ ಪಾಲ್ಯ ಬಳಿಯಿರುವ ಎಂಎಎ ಕ್ಲೀನಿಕ್, ಶೇಷಾದ್ರಿಪುರಂನ ಶ್ರೀ ಶಕ್ತಿ ಹೆಲ್ತ್ ಕೇರ್, ದೊಡ್ಡಕನ್ನಳ್ಳಿಯ ಹೆಲ್ತ್ ಪಾಲಿ ಕ್ಲಿನಿಕ್ ವಿರುದ್ಧ FIR ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಹಾಗೆಯೇ 14 ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ದಂಡ ವಿಧಿಸಿದ್ದು, ಅಂದ್ರಹಳ್ಳಿಯ ಮಾರುತಿ ಕ್ಲಿನಿಕ್​ ಮತ್ತು ಹುಸೈನ್ ಪಾಲಿ ಕ್ಲಿನಿಕ್​​ಗೆ 50,000 ರೂ ದಂಡ, ತಿಗಳರ ಪಾಳ್ಯದ ಶಾರದಾ ಕ್ಲಿನಿಕ್​, ನಾಗಶೆಟ್ಟಿ ಹಳ್ಳಿಯ ಸ್ನೇಹ ಕ್ಲಿನಿಕ್​ ಹಾಗೂ ಫಸ್ಟ್ ಕೇರ್ ಸೂಪರ್ ಸ್ಪೆಷಾಲಿಟಿ ಹೆಲ್ತ್ ಕೇರ್ ಅಂಡ್ ಡಯಾಗ್ನೋಸಿಸ್ ಸೆಂಟರ್​ಗೆ 25,000 ದಂಡ ವಿಧಿಸಿ ಡಿಸಿ ಕ್ರಮ ಕೈಗೊಂಡಿದ್ದಾರೆ. ಒಟ್ಟು 14 ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ದಂಡ ವಿಧಿಸಿ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ‘ರಾಮಾಚಾರಿ’ ಧಾರಾವಾಹಿಯಲ್ಲಿ ಮಹಾತಿರುವು – ರಾಮಾಚಾರಿಯನ್ನು ಕೊಂದೇ ಬಿಟ್ಟ ವಿಲನ್ ಗ್ಯಾಂಗ್!

Btv Kannada
Author: Btv Kannada

Read More