ನಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಮಗಳು ತ್ರಿದೇವಿ ಪೊನ್ನಕ್ಕಳ ಜೊತೆ 2 ವಾರಗಳಲ್ಲಿ 3 ದೇಶ ಸುತ್ತಿ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ವಿಯೆಟ್ನಾಂ, ಶ್ರೀಲಂಕಾ, ಥೈಲ್ಯಾಂಡ್ ದೇಶಗಳಲ್ಲಿ ಈ ಪುಟಾಣಿ ಜೊತೆ ಭರ್ಜರಿ ಮಜಾ ಮಾಡಿದ್ದಾರೆ.

ಮಗುವಾದ ನಂತರ ಮನೆಯಿಂದ ಹೊರಗಡೆ ಬರಲು ಯೋಚಿಸುವ ಜನರ ಮಧ್ಯೆ 8 ತಿಂಗಳ ಕಂದಮ್ಮನೊಡನೆ ಇಷ್ಟೆಲ್ಲ ದೇಶ ಸುತ್ತಿ ಬಂದದ್ದನ್ನು ನೋಡಿ ಜನರು ಆಶ್ಚರ್ಯ ಪಡುತ್ತಿದ್ದಾರೆ. ಇದೊಂದು ಸಾಹಸವೇ ಸರಿ.

ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಸುಂದರ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ತ್ರಿದೇವಿ ಕಂಡರೆ ಅನೇಕರಿಗೆ ಇಷ್ಟ. ಈ ಫೋಟೋಗಳು ನಿಜಕ್ಕೂ ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸಿವೆ. ಒಟ್ಟಿನಲ್ಲಿ ಹರ್ಷಿಕಾ ಪೊಣಚ್ಚ ಹಾಗೂ ಭುವನ್ ಈ ಒಂದು ವಿದೇಶಿ ಪ್ರಯಾಣದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಆ ಎಲ್ಲ ಖುಷಿ ಈಗೀನ ಈ ಫೋಟೋ, ವಿಡಿಯೋಗಳಲ್ಲಿ ಗೊತ್ತಾಗುತ್ತದೆ.

ಕಳೆದ ಅಕ್ಟೋಬರ್‌ನಲ್ಲಿ ಹರ್ಷಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನವರಾತ್ರಿ ಟೈಮ್‌ನಲ್ಲಿಯೇ ಮಗಳು ಹುಟ್ಟಿರೋದು ಇವರಿಗೆ ದುಪ್ಪಟ್ಟು ಖುಷಿ ತಂದಿತ್ತು. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇಬ್ಬರೂ ಕೊಡಗಿನವರು. ಇವರಿಬ್ಬರು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಹರ್ಷಿಕಾ ಅವರು ಕನ್ನಡ, ಬಂಗಾಳಿ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ, ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದಾರೆ.



ಇದನ್ನೂ ಓದಿ : ಆನೇಕಲ್ ತಾ.ಪಂ EO ವಿರುದ್ಧ ಭ್ರಷ್ಟಾಚಾರ ಆರೋಪ – ಕ್ರಮಕ್ಕೆ ಆಗ್ರಹಿಸಿ ಸಚಿವ ಪ್ರಿಯಾಂಕ್ ಖರ್ಗೆಗೆ ದಿನೇಶ್ ಕಲ್ಲಹಳ್ಳಿ ದೂರು!







