ಪ್ಯಾರಾ ನಾರ್ಮಲ್, ಹಾರರ್ ಜಾನರ್​​ನ ‘ಕಮರೊ 2’ ಸಿನಿಮಾ ಆಗಸ್ಟ್ 1ಕ್ಕೆ ತೆರೆಗೆ!

ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಪ್ಯಾರಾ ನಾರ್ಮಲ್, ಹಾರಾರ್ ಜಾನರ್​ನ “ಕಮರೊ2” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು,‌ ಭಾರಿ ಕುತೂಹಲ ಮೂಡಿಸಿದೆ. ಹಾರಾರ್ ಕಥಾಹಂದರವನ್ನೂ ಹೊಂದಿರುವ ಈ ಚಿತ್ರ ಆಗಸ್ಟ್ 1ರಂದು ಬಿಡುಗಡೆಯಾಗಲಿದೆ. ಪವನ್ ಗೌಡ ನಿರ್ಮಾಣದ ಈ ಚಿತ್ರವನ್ನು ಎ.ಪರಮೇಶ್ ನಿರ್ದೇಶಿಸಿದ್ದಾರೆ.

ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ. ಮೊದಲು ಮಾತನಾಡಿದ ನಿರ್ದೇಶಕ ಪರಮೇಶ್, ನಾನು ಈ ಹಿಂದೆ ಕನ್ನಡದಲ್ಲಿ ಮೊದಲ ಬಾರಿ ಅಪರೂಪ ಎನ್ನಬಹುದಾದ ಪ್ಯಾರಾ ನರ್ಮಲ್ ಜಾನರ್ ನ “ಕಮರೊಟು ಚೆಕ್ ಪೋಸ್ಟ್” ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದೆ. ಅದು ನನ್ನ ತಂತ್ರಜ್ಞಾನದ ಅನುಭವಕ್ಕಾಗಿ ಮಾಡಿದ ಚಿತ್ರ. ಅದರಲ್ಲಿ ಯಾವುದೇ ಪರಿಚಿತ ಕಲಾವಿದರು ಅಭಿನಯಿಸಿರಲಿಲ್ಲ. ಆದರೂ ಆ ಚಿತ್ರ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಈಗ ಸೀಕ್ವೆಲ್ ಆಗಿ “ಕಮರೊ2” ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಇದು ಸಹ ಹಾರಾರ್ ಕಥೆಯೊಂದಿಗೆ ಪ್ಯಾರಾ ನಾರ್ಮಲ್ ಜಾನರ್ ನ ಚಿತ್ರವಾಗಿದೆ. ಚಿತ್ರಕ್ಕೆ ಮಂಗಳೂರಿನ ಉಡುಪಿ, ಚಿಕ್ಕ ಮoಗಳೂರು ಸುತ್ತಮುತ್ತಲ್ಲಿನಲ್ಲಿ ಚಿತ್ರೀಕರಣ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

“ಚೋ ಮಂತರ್” ಸಿನಿಮಾದ ಮೊಗ್ರಾ ಪತ್ರದಿಂದಾಗಿ ಚಿರಪರಿಚಿತರಾಗಿರುವ ರಜನಿ ಭಾರದ್ವಾಜ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ನೀನಾಸಂ ಅಶ್ವಥ್, ನಾಗೇಂದ್ರ ಅರಸ್, ಮಹೇಶ್ ರಾಜ್, ಬೇಬಿ ಖುಷಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಶೇಷಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸಹ ಇದ್ದಾರೆ. ಎ.ಟಿ. ರವೀಶ್ ಸಂಗೀತ ನಿರ್ದೇಶನ ಹಾಗೂ ಪ್ರಜ್ವಲ್ ಗೌಡ ಛಾಯಾಗ್ರಹಣವಿರುವ ಈ ಚಿತ್ರ ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂರಿಸುವ ಹಾಗೂ ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರ ಎಂದು ಹೇಳುತ್ತಾ ನಿರ್ದೇಶಕರು, ಆಗಸ್ಟ್ 1 ರಂದು ರಾಜ್ಯದಂತ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಪ್ರಿಯಾಂಕ ಉಪೇಂದ್ರ ಅವರು ಮಾತನಾಡಿ, ನಿರ್ದೇಶಕ ಪರಮೇಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ನನ್ನ ಪಾತ್ರ ಕೂಡ ಚೆನ್ನಾಗಿದೆ. ಗುಟಮಟ್ಟದಲ್ಲಂತೂ ಯಾವುದೇ ಭಾಷೆಗಳ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ಬಹಳ ಉತ್ತಮಾವಾಗಿ ಚಿತ್ರಿಸಿದ್ದಾರೆ. ಇಂತಹ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಬೇಕು. ನನ್ನ ಪಾತ್ರ ಕೂಡ ಇಲ್ಲಿ ವಿಭಿನ್ನವಾಗಿದೆ ಎಂದರು.

ನಿರ್ಮಾಪಕ ಪವನ್ ಗೌಡ ಮಾತನಾಡಿ, ತಂತ್ರಜ್ಞರು ಹಾಗೂ ಕಲಾವಿದರು ನೀಡಿದ ಪ್ರೋತ್ಸಾಹವೇ ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣ. ಅವರಿಗೆ ನನ್ನ ಧನ್ಯವಾದ. ಇದು ನನ್ನ ನಿರ್ಮಾಣದ ಮೊದಲ ಚಿತ್ರ. ನಾನು ರವಿಚಂದ್ರನ್ ಅವರ ಅಭಿಮಾನಿ. ಹಾಗಾಗಿ ನಮ್ಮ ಸಂಸ್ಥೆಗೆ ಕನಸು ಪಿಕ್ಚರ್ಸ್ ಎಂದು ಹೆಸರಟ್ಟಿದ್ದೇನೆ. ಆಗಸ್ಟ್ 1 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರ ಬೆಂಬವಿರಲಿ ಎಂದರು.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ KGF ಬಾಬು ಮನೆ ಮೇಲೆ RTO ಅಧಿಕಾರಿಗಳ ರೇಡ್ – ಐಷಾರಾಮಿ ಕಾರುಗಳು ಸೀಜ್?

Btv Kannada
Author: Btv Kannada

Read More