ಕೋಲ್ಕತ್ತಾದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ – ಆರೋಪಿ ಪರಮಾನಂದ ಮಹಾವೀರ ಜೈನ್​​​​ಗೆ ಜಾಮೀನು ಮಂಜೂರು!

ಬಾಗಲಕೋಟೆ : ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಪರಮಾನಂದ ಮಹಾವೀರ ಜೈನ್​​​​ಗೆ ಜಾಮೀನು ಮಂಜೂರು ಆಗಿದೆ. 50 ಸಾವಿರ ಬಾಂಡ್​​ ಪಡೆದು ಕೋರ್ಟ್ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಮೂಲದ ಪರಮಾನಂದ ಮಹಾವೀರ ಜೈನ್​​​​ಗೆ ಬೇಲ್‌ ಸಿಕ್ಕಿದ್ದು, 50 ಸಾವಿರ ಬಾಂಡ್, ಪಾಸ್ ಪೋರ್ಟ್ ಸರೆಂಡರ್‌, ಅನುಮತಿ ಇಲ್ಲದೆ ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ‌ ಎಂದು ಆರೋಪಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ದೂರುದಾರ ಯುವತಿಯಿಂದ ತನಿಖೆಗೆ ಅಸಹಕಾರ ಹಾಗೂ ಎರಡು ಬಾರಿಯೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

ಕೊಲ್ಕತ್ತಾದ ಆಲಿಪೋರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಆರೋಪಿ ಪರಮಾನಂದಗೆ ಜಾಮೀನು ನೀಡಲಾಗಿದೆ. ಪರಮಾನಂದ್ ಪರ ಕರ್ನಾಟಕದ ವಕೀಲ ವರುಣ್ ಪಾಟೀಲ್ ಮತ್ತು ಮಹೇಂದ್ರ ಮಂಡಿಸಿದ್ದರು.

ಅತ್ಯಾಚಾರ ಪ್ರಕರಣ ಸಂತ್ರಸ್ಥೆ ವೈದ್ಯಕೀಯ ಪರೀಕ್ಷೆ ಹಾಜರಾಗಿಲ್ಲ. ಪರಮಾನಂದ್ ಜೈನ್ ವಿರುದ್ದ ಸುಳ್ಳು ದೂರು ದಾಖಲಿಸಲಾಗಿದೆ. ಸಂತ್ರಸ್ಥೆ ತಂದೆ ಸಹ ತನ್ನ ಮಗಳ ಮೇಲೆ ಆತ್ಯಾಚಾರ ಆಗಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಎಲ್ಲಾ ಮಾಹಿತಿ ಸಂಗ್ರಹಿಸಿ ಕೋರ್ಟ್ ನಲ್ಲಿ ಪರಮಾನಂದ್ ಜೈನ್ ಪರ ವಕೀಲರು ವಾದ ಮಂಡಿಸಿದ್ದಾರೆ.

ಇದನ್ನೂ ಓದಿ : ಮದ್ಯ ಹಗರಣ : YSRCP ಸಂಸದ ಮಿಧುನ್ ರೆಡ್ಡಿ ಅರೆಸ್ಟ್!

Btv Kannada
Author: Btv Kannada

Read More