ಹಾವೇರಿಯಲ್ಲಿ ತರಕಾರಿ ವ್ಯಾಪಾರಿಗೆ GST ಸಂಕಷ್ಟ – ಬರೋಬ್ಬರಿ 29 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್!

ಹಾವೇರಿ : ಹಾವೇರಿ ನಗರದ ತರಕಾರಿ ವ್ಯಾಪಾರಿಯೊಬ್ಬನಿಗೆ GST ಸಂಕಷ್ಟ ಎದುರಾಗಿದೆ. ತರಕಾರಿ ವ್ಯಾಪಾರಿ ಶಂಕರಗೌಡ ಹಾದಿಮನಿ ಎಂಬುವವರಿಗೆ ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಬರೋಬ್ಬರಿ 29 ಲಕ್ಷ GST ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ.

ಶಂಕರಗೌಡ ಹಾವೇರಿ ನಗರದ ಬಸವೇಶ್ವರ ನಗರದಲ್ಲಿರೋ ಸಾಯಿರಾಮ್ ಫಾರ್ಮ್ ಫ್ರೆಶ್ ತರಕಾರಿ ಅಂಗಡಿ ಮಾಲೀಕ. ಅವರು ಸುಮಾರು 4 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡ್ತಿದ್ದಾರೆ. ಒಂದು ವರ್ಷದಲ್ಲಿ UPI ಮೂಲಕ 1ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾಗಿದೆ. ಈ ಹಿನ್ನೆಲೆ ಕೂಡಲೇ 29 ಲಕ್ಷ ರೂ. GST ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

ಸದ್ಯ ವಾಟ್ಸಪ್ ಮೂಲಕವೇ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ. ನೋಟಿಸ್ ಜಾರಿಯಿಂದ ಇದೀಗ ವ್ಯಾಪಾರಿ ಶಂಕರಗೌಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ : ನಕಲಿ ದಾಖಲೆ ಸೃಷ್ಟಿ ಆರೋಪ – ಸಿ.ಮುನಿರಾಜು ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಶಾಸಕ ಸುಬ್ಬಾರೆಡ್ಡಿ!

Btv Kannada
Author: Btv Kannada

Read More