ಬೆಂಗಳೂರು : ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 11ರಿಂದ 22 ರವರೆಗೆ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದಾರೆ.
![]()
ಆಗಸ್ಟ್ 11ರಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪೂರ್ವಾಹ್ನ 11ಕ್ಕೆ ವಿಧಾನಮಂಡಲದ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಒಟ್ಟು 12 ದಿನಗಳ ಪೈಕಿ 8 ದಿನ ಮಾತ್ರ ಅಧಿವೇಶನ ನಡೆಯಲಿದೆ. ಕರ್ನಾಟಕ ವಿಧಾನಮಂಡಲದ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆಗಸ್ಟ್ 11 ಸೋಮವಾರದಿಂದ 22-08-2025ರವರೆಗೆ ವಿಧಾನಮಂಡಲದ ಕಲಾಪಗಳು ನಡೆಯಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿಧಾನಸಭೆಯ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿ
ಆ.11ರಂದು ಸರ್ಕಾರಿ ಕಾರ್ಯಕಲಾಪಗಳು
ಆ.12ರಂದು ಸರ್ಕಾರಿ ಕಾರ್ಯಕಲಾಪಗಳು
ಆ,13ರಂದು ಸರ್ಕಾರಿ ಕಾರ್ಯಕಲಾಪಗಳು
ಆ.14ರಂದು ಖಾಸಗಿ-ಸರ್ಕಾರಿ ಕಾರ್ಯಕಲಾಪಗಳು
ಆ.15ರಂದು ಸಾರ್ವತ್ರಿಕ ರಜಾದಿನ
ಆ.16ರಂದು 2ನೇ ಶನಿವಾರ ಆಗಿರುವುದರಿಂದ ಸರ್ಕಾರಿ ಕಾರ್ಯಕಲಾಪಗಳು ಇರುವುದಿಲ್ಲ
ಆ.17ರಂದು ಭಾನುವಾರ ಸಾರ್ವಜನಿಕ ರಜಾದಿನ
ಆ.18ರಂದು ಸರ್ಕಾರಿ ಕಾರ್ಯಕಲಾಪಗಳು
ಆ.19ರಂದು ಸರ್ಕಾರಿ ಕಾರ್ಯಕಲಾಪಗಳು
ಆ.20ರಂದು ಸರ್ಕಾರಿ ಕಾರ್ಯಕಲಾಪಗಳು
ಆ.21ರಂದು ಖಾಸಗಿ-ಸರ್ಕಾರಿ ಕಾರ್ಯಕಲಾಪಗಳು
ಆ.22ರಂದು ಸರ್ಕಾರಿ ಕಾರ್ಯಕಲಾಪಗಳು
ಇದನ್ನೂ ಓದಿ : ದಾಖಲೆ ಲಾಭ ಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್.. ಕೇವಲ 3 ತಿಂಗಳಲ್ಲಿ ಬರೋಬ್ಬರಿ 26,994 ಕೋಟಿ ರೂ. ಪ್ರಾಫಿಟ್!







