7 ಸಾವಿರ ಕೋಟಿ ಒಡೆಯನಿಗೆ ಬೀಗರೇ ವಿಲನ್ – ವಂಚಕ ಗುಲಾಮ್ ಮುಸ್ತಾಫಾನ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾದ KGF ಬಾಬು!

ಬೆಂಗಳೂರು : ಹಗಲು-ರಾತ್ರಿ ಅಂತಾ ನೋಡದೇ ಕಷ್ಟಪಟ್ಟು ತನ್ನ ಪರಿಶ್ರಮದಿಂದ ಸಾವಿರಾರು ಕೋಟಿ ಆಸ್ತಿ ಮಾಡಿರುವ ಪ್ರಾಮಾಣಿಕ ಉದ್ಯಮಿಗೆ ಸ್ವಂತ ಬೀಗನೇ ಶತ್ರುವಾಗಿ ಪರಿಣಮಿಸಿದ್ದಾನೆ. ಹೌದು.. ಬರೋಬ್ಬರಿ 7 ಸಾವಿರ ಕೋಟಿ ಒಡೆಯ KGF ಬಾಬುಗೆ ಬೀಗರೇ ವಿಲನ್ ಆಗಿಬಿಟ್ಟಿದ್ದಾರೆ. ಹಮ್​ ಸಾಥ್​..ಸಾಥ್​​.. ಅಂತೇಳಿ ಬೀಗ ಗುಲಾಮ್ ಮುಸ್ತಾಫಾ ಇದೀಗ ಭಗ್ನಿಗೂಟ ಇಟ್ನಲ್ಲ ಎಂದು KGF ಬಾಬು ಕಣ್ಣೀರಧಾರೆ ಸುರಿಸುತ್ತಿದ್ದಾರೆ.

ವಂಚಕ ಬೀಗ ಗುಲಾಮ್ ಮುಸ್ತಾಫಾ ಕುತಂತ್ರಕ್ಕೆ ಉದ್ಯಮಿ KGF ಬಾಬು ಕಣ್ಣೀರು ಹಾಕುವಂತಾಗಿದ್ದು, ಸಾವಿರಾರು ಕೋಟಿ ಕಬಳಿಸಲು ಸ್ವಂತ ಬೀಗ ಗುಲಾಮ್ ಮುಸ್ತಾಫಾ ಮಾಡಿರುವ ಮಹಾ ಪಿತೂರಿ ಬಗ್ಗೆ KGF ಬಾಬು ಬಿಟಿವಿ ಬಳಿ ಹೇಳಿಕೊಂಡಿದ್ದಾರೆ. ಇನ್ನು, SBI ಬ್ಯಾಂಕ್ ಸೇರಿ ಹಲವರಿಗೆ ಹತ್ತಾರು ಕೋಟಿ ರೂಪಾಯಿ ಮೋಸ ಮಾಡಿರುವ ಗುಲಾಮ್ ಮುಸ್ತಾಫಾ ಷಡ್ಯಂತ್ರಕ್ಕೆ KGF ಬಾಬು ಸೆಡ್ಡು ಹೊಡೆಯಲು ಸಜ್ಜಾಗಿದ್ದು, ಮುಸ್ತಾಫಾ ವಿರುದ್ಧ ಕಾನೂನು ಸಮರಕ್ಕೆ  ಮುಂದಾಗಿದ್ದಾರೆ.

200 ಕೋಟಿ ಕೊಡದಿದ್ದಕ್ಕೆ KGF ಬಾಬು ವಿರುದ್ಧ ಜಿದ್ದು ಸಾಧಿಸ್ತಿರುವ ಸ್ವಂತ ಬೀಗ ಗುಲಾಮ್ ಮುಸ್ತಾಫಾ, GM ಇನ್ಫಿನಿಟಿ ಹೆಸರಲ್ಲಿ ಜನರಿಗೆ ಮೋಸ ಮಾಡ್ತಿದ್ದಾನಂತೆ. ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಡೆವಲಪ್ಪರ್ ಅಂದ್ಕೊಂಡೇ ವಂಚನೆ ಎಸಗುತ್ತಿದ್ದು, ಸಾವಿರಾರು ಜನರಿಗೆ ಫ್ಲ್ಯಾಟ್ ಹೆಸರಲ್ಲಿ ಮೋಸ ಮಾಡಿ ಹತ್ತಾರು ಬ್ಯಾಂಕ್​ಗಳಿಂದ 2 ಸಾವಿರ ಕೋಟಿ ಸಾಲ ಮಾಡ್ಕೊಂಡು ಮುಸ್ತಾಫಾ ಓಡಾಡುತ್ತಿದ್ದಾನೆ.

ಬ್ಯುಸಿನೆಸ್​​ನಲ್ಲಿ ಕೋಟಿ ಕೋಟಿ ನಷ್ಟ ಆಗಿದ್ದಕ್ಕೆ KGF ಬಾಬು ಮೇಲೆ ಜಿದ್ದಿಗೆ ಬಿದ್ದಿರುವ ಗುಲಾಮ್ ಮುಸ್ತಾಫಾ, ಲಾಸ್ ಆಗ್ತಿದ್ದಂತೆ KGF ಬಾಬು ಮೇಲೆ ಕೆಂಡ ಕಾರೋಕೆ ಶುರು ಮಾಡಿದ್ದಾನೆ. ಎಲೆಕ್ಟ್ರಾನಿಕ್ ಸಿಟಿಯ ಎಕರೆಗಟ್ಟಲೆ ಪ್ರಾಪರ್ಟಿ ಕಬ್ಜಾ ಮಾಡೋಕೆ ತಂತ್ರ ರೂಪಿಸಿರುವ ಮುಸ್ತಾಫಾ, ಹಣ.. ಹಣ.. ಬೇಕೆಂದು KGF ಬಾಬುಗೆ ಕಿರುಕುಳ ನೀಡುತ್ತಿದ್ದಾನಂತೆ. ಪ್ರಾಪರ್ಟಿ ಹಣ ಕೊಡದಿದ್ರೆ ಫಿನಿಶ್ ಮಾಡ್ತೀನಿ ಅಂತಾ KGF ಬಾಬುಗೆ ಬೆದರಿಕೆ ಕೂಡ ಹಾಕಿದ್ದಾನೆ ಎಂಬ ಆರೋಪಗಳು ಕೇಳಿಬಂದಿದೆ. ಇನ್ನು, ಮುಗ್ಧ ಜನರನ್ನು ಎತ್ತಿಕಟ್ಟಿ KGF ಬಾಬು ಹೆಸರು ಹಾಳು ಮಾಡೋಕೆ ಗುಲಾಮ್ ಮುಸ್ತಾಫಾ ಪ್ಲ್ಯಾನ್ ಮಾಡಿದ್ದಾನೆ ಎನ್ನಲಾಗಿದೆ.

ಸದ್ಯ ಬೀಗ ಗುಲಾಮ್ ಮುಸ್ತಾಫಾ ವಿರುದ್ಧ ಕಾನೂನು ಸಮರಕ್ಕೆ KGF ಬಾಬು ಇಳಿದಿದ್ದಾರೆ. ಗುಲಾಮ್​ ಮುಸ್ತಾಫಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ KGF ಬಾಬು ಒತ್ತಾಯಿಸಿದ್ದು, 20 ಕೋಟಿ ವಜ್ರಾಭರಣ ಹೊತ್ತೊಯ್ದ ಸಂಬಂಧ ದೂರು ನೀಡಲು ತಯಾರಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್​ ಠಾಣೆಯಲ್ಲಿ ದೂರು ನೀಡಲಿರುವ KGF ಬಾಬು, ಜೊತೆಯಲ್ಲಿದ್ದೇ ಮೋಸ ಮಾಡಿರುವ ಮುಸ್ತಾಫಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕಂಡಕ್ಟರ್ ಯಡವಟ್ಟಿನಿಂದ ಕ್ಯಾಂಟೀನ್​​ಗೆ ನುಗ್ಗಿದ BMTC ಬಸ್ – ಮಹಿಳೆ ಸಾವು, ಮಗುವಿನ ಸ್ಥಿತಿ ಗಂಭಿರ!

Btv Kannada
Author: Btv Kannada

Read More