ದ್ವಿಭಾಷಾ ಸಿನಿಮಾ ‘ಗದಾಧಾರಿ ಹನುಮಾನ್’ ಟೀಸರ್​ ರಿಲೀಸ್​!

‘ಗದಾಧಾರಿ ಹನುಮಾನ್’ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಿರೋ ದ್ವಿಭಾಷಾ ಸಿನಿಮಾ. ಇತ್ತೀಚೆಗೆ ಮಹಾಲಕ್ಷ್ಮೀ ಲೇಔಟ್​ನ ಆಂಜನೇಯ ದೇವಸ್ಥಾನದಲ್ಲಿ ಚಿತ್ರದ ಟೀಸರ್ ಲಾಂಚ್ ಮಾಡಲಾಗಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಗದಧಾರಿ ಹನುಮಾನ್ ಚಿತ್ರದ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸದ್ಯ ರಿಲೀಸ್​​ಗೆ ರೆಡಿಯಾಗಿರೋ‌ ‘ಗದಾಧಾರಿ ಹನುಮಾನ್’ ಮೊದಲ ನೋಟದಲ್ಲೇ ಫ್ಯಾಂಟಸಿ ಸಿನಿಮಾದಂತೆ ಕಾಣ್ತಿದೆ. ದುಬಾರಿ ವೆಚ್ಚದ ಗ್ರಾಫಿಕ್ಸ್ ವಿಎಫ್​ಎಕ್ಸ್ ಹಾಗೂ ಸೌಂಡ್ ಎಫೆಕ್ಟ್ಸ್ ಮೇಕಿಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದ್ದು, ತಂತ್ರಜ್ಞಾನದ ನೈಪುಣ್ಯದ ಜೊತೆ ಕಂಡಿರೋ ತಾರಾಬಳಗ ಈ ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ.

ವಿರಾಬ್ ಸ್ಟುಡಿಯೋಸ್ ಬ್ಯಾನರ್​ನಡಿಯಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್.ಕೆ.ಆರ್ ಜೊತೆಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ರೋಹಿತ್ ಕೊಲ್ಲಿ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ.

ಗದಾಧಾರಿ ಹನುಮಾನ್ ಸಾಹಸಮಯ, ಹಾರರ್ ಥ್ರಿಲ್ಲರ್, ದೈವತ್ವ ಹಾಗೂ ರಾಕ್ಷಸತ್ವದ ಕಥಾಹಂದರವಿರೋ‌ ಚಿತ್ರವಾಗಿದ್ದು, ತಾರಕಾಸುರ ಖ್ಯಾತಿಯ ಕಿರಣ್ ( ವೈಭವ್) ಈ ಚಿತ್ರದ ನಾಯಕನಾಗಿ ಬಣ್ಣಹಚ್ಚಿದ್ದಾರೆ. ನಾಯಕನಿಗೆ ಹೊಸ ಪ್ರತಿಭೆ ಹರ್ಷಿತಾ ನಾಯಕಿಯಾಗಿದ್ದಾರೆ. ಇವರೊಟ್ಟಿಗೆ ಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ, ಶಿವಪ್ಪ, ಅರ್ಜುನ್, ಭೀಷ್ಮ, ಲೋಕೇಶ್ ನಟಿಸಿದ್ದಾರೆ.

ಜ್ಯೂಡಾ ಸ್ಯಾಂಡಿ ಸಂಗೀತ, ಅರುಣ್ ಗೌಡ ಛಾಯಾಗ್ರಣ ಈ ಚಿತ್ರಕ್ಕಿದೆ. ಸಿ.ಎನ್ ಕಿಶೋರ್ ಸಂಕಲನ ಮಾಡಿದ್ದಾರೆ. ಟೈಗರ್ ಶಿವು ಸಾಹಸ ಸಂಯೋಜನೆ ಮಾಡಿದ್ದಾರೆ ಬೆಂಗಳೂರು, ಹಂಪಿ, ಗಂಗಾವತಿ, ಅಂಜನಾದ್ರಿ, ಕಿತ್ತೂರು, ಹೊನ್ನಾಪುರ ಹೀಗೆ ಬಹುತೇಕ ಕರ್ನಾಟಕದಲ್ಲೇ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಟೀಸರ್ ಲಾಂಚ್ ಮಾಡಿ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡ ಚಿತ್ರತಂಡ ಸದ್ಯದಲ್ಲೇ ತೆರೆಗೆ ತರೋ ಸನ್ನಾಹದಲ್ಲಿದೆ.

ಇದನ್ನೂ ಓದಿ : ಬಿಜೆಪಿ ಶಾಸಕ ಸುನಿಲ್ ಕುಮಾರ್‌ಗೆ ಪಿತೃ ವಿಯೋಗ.. ತಂದೆ ಎಂ.ಕೆ ವಾಸುದೇವ್ ನಿಧನ

Btv Kannada
Author: Btv Kannada

Read More